×
Ad

ಯಾದಗಿರಿ | ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ

ಜೀವನದ ಯಶಸ್ಸಿಗೆ ಶಿಕ್ಷಣ ಒಂದೇ ದಾರಿ : ತುಲಸಿರಾಮ

Update: 2025-10-26 19:24 IST

ಯಾದಗಿರಿ : ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕೆದರೆ ಶಿಕ್ಷಣ ಒಂದೇ ಅದಕ್ಕೆ ಹೆಬ್ಬಾಗಿಲು. ಇದನ್ನು ಅರಿತು ನಮ್ಮ ಸಮಾಜದ ಪ್ರತಿಯೊಬ್ಬರು ಕಡ್ಡಾಯವಾಗಿ ಉನ್ನತ ಶಿಕ್ಷಣ ಪಡೆಯಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ಅರ್.ತುಲಸಿರಾಮ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಅಖಿಲ‌ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉತ್ತಮ‌, ಆರ್ದಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ನೀಡಿರುವ ಸೌಲಭ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಂಡು ಹೆಚ್ಚಿನ ಅಂಕಗಳನ್ನು ಪಡೆದು ಪಾಸಾಗಬೇಕು. ಆ ಮೂಲಕ ಉನ್ನತ ಹುದ್ದೆಗಳನ್ನು ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಋಣ ತೀರಿಸುವ ಕೆಲಸ ಮಾಡಬೇಕೆಂದರು.

ರಾಜಕೀಯವಾಗಿ ಅಧಿಕಾರ ಸಿಕ್ಕಾಗ ಮಾತ್ರ ಸಮಾಜಕ್ಕೆ ವಿವಿಧ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ‌ ಒಗ್ಗಟ್ಟು ಇರಬೇಕು. ಬೇರೆ ಎಲ್ಲ ಸಮುದಾಯಗಳನ್ನು ಪ್ರೀತಿಯಿಂದ ಕಾಣುವ ಮೂಲಕ ಸಮಾಜದ ಸಂಘಟನೆ ಮಾಡಬೇಕಂದು ತುಲಸಿರಾಮ ಹೇಳಿದರು.

ಉತ್ತರ ರಾಜ್ಯದ್ಯಕ್ಷರಾದ ಮರೆಪ್ಪ ನಾಯಕ, ಜಿಲ್ಲಾದ್ಯಕ್ಷ ದೇವಿಂದ್ರಪ್ಪಗೌಡ ಆಲ್ದಾಳ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀದರ ಪಾಟೀಲ್, ಭೀಮರಾಣಗುಂದಿ, ಹಸಿರು ಸೇವೆ ರಾಜ್ಯ ಉಪಾಧ್ಯಕ್ಷ ಕಾಂತು ಪಾಟೀಲ್, ಎಸ್.ಎಸ್. ನಾಯಕ, ಬಿಜೆಪಿ ಯುವ ಘಟಕದ ಅದ್ಯಕ್ಷ ಶ್ರೀದರ್ ರಾಯಚೂರು, ಸುರಪುರ ತಾಲೂಕು ಮರೆಪ್ಪ‌ ಪ್ಯಾಟಿ, ರಮೇಶ ದೊರೆ, ಜಿಲ್ಲಾಧ್ಯಕ್ಷ ಬಿ.ಬಿ.ನರಸಪ್ಪ ನಾಯಕ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರ್ದಶನ ನಾಯಕ, ನಗರಸಭೆ ಸದಸ್ಯ ಹಣಮಂತ ನಾಯಕ, ಮಹಾವೀರ ನಾಯಕ,ಸಮಾಜ‌ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ, ಭೀಮರಾಯ ರಾಣಗುಂದಿ, ಬಸಲಿಂಗಪ್ಪ ಹುಲಕಲ್, ಬಸವರಾಜ ನೀಲಹಳ್ಳಿ, ಎಸ್ ಎಸ್ ನಾಯಕ, ಜರ್ನಾಥನ ನಾಯಕ, ಶುಭಾಶ ನಾಯಕ, ಜನಾರ್ಧನ, ಬಸವರಾಜ ನೀಲಹಳ್ಳಿ, ಮೋನಪ್ಪ ಹಳಿಗೇರಿ, ಆಜಂನಯ್ಯ ಮಲ್ಹಾರ್, ಹಣಮಂತ ಖಾನಳ್ಳಿ ಇದ್ದರು.

ಹೆಚ್ಚಿನ ಶಿಕ್ಷಣ ಪಡೆಯಿರಿ :

ಅಹಿಂದ ಘಟಕದ ಅಧ್ಯಕ್ಷ ಹಣಮೇಗೌಡ ಬಿರನಕಲ್ ಮಾತನಾಡಿ, ರಾಜಕೀಯ, ಸಾಮಾಜಿಕವಾಗಿ‌ ನಾವಿನ್ನೂ ಸಾಕಷ್ಟು‌ ಹಿಂದೇ ಇದ್ದೆವೆ. ಇವುಗಳನ್ನು‌ ಪಡೆಯಲು ಶಿಕ್ಷಣ ಕಲಿಯುವುದು ಅತಿ ಅವಶ್ಯವಿದೆ. ಈ ನಿಟ್ಟಿನಲ್ಲಿ ಸಮಾಜದ ಮಕ್ಕಳು ಹೆಚ್ಚಿನ ಅಭ್ಯಾಸ ಮಾಡಬೇಕೆಂದರು.


100 ಕ್ಕೂ ಹೆಚ್ಚು‌ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ :

ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಸುಮಾರು 100 ಅಧಿಕ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಶಿಕ್ಷಕರನ್ನು ಹಾಗೂ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ವಾಲ್ಮೀಕಿ ವೃತ್ತದಿಂದ ಕಾರ್ಯಕ್ರಮದ ವೇದಿಕೆಯವರೆಗೂ ಅದ್ದೂರಿ ಮೆರವಣಿಗೆ ನಡೆಯಿತು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News