×
Ad

ಯಾದಗಿರಿ | ಹೆಚ್ಚಿದ ಕುರಿಕಳ್ಳತನ : ಅ.31 ರಂದು ಜಿಲ್ಲಾಡಳಿತ ವಿರುದ್ಧ ಬೃಹತ್ ಪ್ರತಿಭಟನೆ

Update: 2025-10-24 19:44 IST

ಯಾದಗಿರಿ : ಜಿಲ್ಲೆಯಲ್ಲಿ ಕುರಿ ಕಳ್ಳರ ಉಪಟಳವು ಹೆಚ್ಚಿದ್ದು, ಕಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವ ಜಿಲ್ಲಾಡಳಿತ ವಿರುದ್ದ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾ ಸಂಘದ ವತಿಯಿಂದ ಅ.31 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಹೈಕೂರ್ ಹೇಳಿದರು.

ಸೈದಾಪೂರ ಪಟ್ಟಣದ ಕನಕ ಭವನದಲ್ಲಿ ನಡೆದ ಕುರಿಗಾಹಿಗಳ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಸರಣಿ ಕುರಿ, ಮೇಕೆ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಕಳವು ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿ ಕಳ್ಳರನ್ನು ಹಿಡಿದು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಜಿಲ್ಲೆಯಾದ್ಯಂತ ಇಲ್ಲಿಯವರೆಗೂ ಸುಮಾರು 400ಕ್ಕೂ ಅಧಿಕ ಕುರಿಗಳು ಕಳ್ಳತನವಾಗಿದ್ದು, ಸುಮಾರು 70 ರಿಂದ 80 ಲಕ್ಷಾಂತರ ರೂಪಾಯಿ ಮೌಲ್ಯ ನಷ್ಟವಾಗಿದೆ.

ಕುರಿಗಾಹಿಗಳು ಮಳೆ, ಗಾಳಿ, ಬಿಸಿಲೆನ್ನದೇ ಕುರಿ ಹಿಂಡುಗಳೊಂದಿಗೆ ಅಲೆದಾಡುತ್ತಾ, ಕುರಿಗಳ ಆಹಾರಕ್ಕಾಗಿ ತಮ್ಮ ಕುಟುಂಬಗಳ ಜೀವಗಳನ್ನು ಲೆಕ್ಕಿಸದೇ ಅಲೆಮಾರಿಗಳಾಗಿ ಜೀವಿಸುತ್ತಿದ್ದು, ಇವರಿಗೆ ಸೂಕ್ತ ನ್ಯಾಯ ದೊರಕಿಸಿ ಕಳ್ಳರಿಗೆ ಕಡಿವಾಣ ಹಾಕಬೇಕೆಂದು ಹೋರಾಟ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕುರುಬ ಸಮಾಜದ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಹೈಕೂರ್, ತಾಲೂಕ ಅಧ್ಯಕ್ಷ ಸೂರ್ಯಕಾಂತ ಅಲ್ಲಿಪೂರ, ಮಾಜಿ ತಾಲೂಕ ಅಧ್ಯಕ್ಷ ಹೊನ್ನಪ್ಪ ಮುಸ್ಟೂರು, ಸಾಂಪ್ರದಾಯಿಕ ಕುರಿಗಾಹಿಗಳ ಹೋರಾಟ ಸಮಿತಿಯ ವಕೀಲರಾದ ಯಲ್ಲಪ್ಪ ಹೆಗಡೆ, ಮುಖಂಡರುಗಳಾದ ಚಂದ್ರಶೇಖರ ವಾರದ, ಶರಣಪ್ಪ ಶೆಟ್ಟಿಗೇರ, ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬೀರೇಶ ಚಿರತೆನೂರ್, ಯಂಕೋಬ ತುರಕನದೊಡ್ಡಿ, ವೆಂಕಟೇಶ ಕೊಂಕಲ್, ಹಣಮಂತ ಕಣೆಕಲ್, ರವಿಕುಮಾರ್ ಕಡೆಚೂರು, ಶಿವಕುಮಾರ ಮುನಗಲ್, ಮಹೇಶ ಜೇಗರ್, ವಿಜಯ ಕಂದಳ್ಲಿ, ನಾಗರಾಜ ಸಂಗವಾರ, ಯಲ್ಲಾಲಿಂಗ ಗೂಡೂರು, ಬೀರಲಿಂಗಪ್ಪ ಕಿಲ್ಲನಕೇರಾ, , ಬೀರಪ್ಪ ಮುನಗಲ್, ಶಿವು ಬೆಳಗುಂದಿ, ಹೊನ್ನೇಶ ದೊಡ್ಮನಿ, ಸಿದ್ದು ಪೂಜಾರಿ ಬದ್ದೆಪಲ್ಲಿ, ನಿಜಲಿಂಗಪ್ಪ ವಂಕಸಂಬ್ರ, ಬಾಲಗಿರಿ ಬಾಡಿಯಾಲ ಸೇರಿದಂತೆ ವಿವಿಧ ಗ್ರಾಮಗಳ ಕುರಿಗಾಹಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News