×
Ad

ಯಾದಗಿರಿ | ಕನ್ನಡ ನಾಡು, ನುಡಿ, ನೆಲ–ಜಲ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ : ವಿಶ್ವನಾಥ ನಾಯಕ

Update: 2025-09-30 19:19 IST

ಯಾದಗಿರಿ: ಕನ್ನಡ ನಾಡು, ನುಡಿ, ನೆಲ ಮತ್ತು ಜಲ ರಕ್ಷಣೆಯು ಕೇವಲ ಕನ್ನಡ ಪರ ಹೋರಾಟಗಾರರ ಹೊಣೆಗಾರಿಕೆ ಮಾತ್ರವಲ್ಲ. ಪ್ರತಿಯೊಬ್ಬ ಕನ್ನಡಿಗನ ನೈತಿಕ ಜವಾಬ್ದಾರಿಯಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ ಸ್ಪಷ್ಟಪಡಿಸಿದರು.

ನಗರದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಸಂಘಟನೆಗೆ ನೂತನವಾಗಿ ಸೇರ್ಪಡೆಯಾದ ಸದಸ್ಯರಿಗೆ ಸ್ವಾಗತ ಕೋರಿ ನೇಮಕಾತಿ ಆದೇಶಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘಟನೆಯಲ್ಲಿ ಒಳ್ಳೆಯ ಉದ್ದೇಶ ಇಟ್ಟುಕೊಂಡು ಸೇವೆಗೆ ಮುಂದಾಗಬೇಕು. ದುರುದ್ದೇಶದಿಂದ ತೊಡಗಿಸಿಕೊಳ್ಳುವಂತಿಲ್ಲ. ರೈತರು, ಬಡವರು ಮತ್ತು ಶೋಷಿತರ ಪರ ಹೋರಾಡುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಧೈರ್ಯದಿಂದ ನಿಲ್ಲುವ ಕಾರ್ಯಕರ್ತರ ಅಗತ್ಯವಿದೆ” ಎಂದು ಕರೆ ನೀಡಿದರು.

ಈ ವೇಳೆ ಭೀಮಾಶಂಕರ ಪೂಜಾರಿಗೆ ಜಿಲ್ಲಾ ಕಾರ್ಯದರ್ಶಿ ಸ್ಥಾನವನ್ನು ನೀಡಲಾಯಿತು. ನೇಮಕಾತಿ ಆದೇಶಪತ್ರವನ್ನು ಹಸ್ತಾಂತರಿಸಿದ ಬಳಿಕ, ಸಂಘಟನೆಯಲ್ಲಿ ಸೇರ್ಪಡೆಗೊಂಡ ಸದಸ್ಯರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ರಾಜಕುಮಾರ ಸಾಹುಕಾರ ಖಾನಾಪೂರ, ಶಿವರಾಜ ಗುತ್ತೇದಾರ, ನಾಗರಾಜ ರಾಮಸಮುದ್ರ, ರಂಗನಾಥ ನಾಯಕ, ನವಾಜ್ ಖಾದ್ರಿ, ರಂಗನಾಥ ಐಕೂರ, ಭೀಮಣ್ಣ ಬುದಿನಾಳ ವಡಗೇರಿ, ಮಲ್ಲು ಪೂಜಾರಿ, ದೇವಪ್ಪ ಜೋಳದಡಿಗಿ, ಮಲ್ಲಣ್ಣ ಸಾಹುಕಾರ, ಮುತ್ತಣ್ಣ, ಮಲ್ಲು ಎಂ., ಬೀರಲಿಂಗಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News