×
Ad

ಯಾದಗಿರಿ | ತ್ಯಾಗ, ಚಳುವಳಿಯಿಂದ ಕರ್ನಾಟಕ ರಾಜ್ಯ ಉದಯ : ವೆಂಕಟರಾವ್

ಪ್ರಶಸ್ತಿ ಪುರಸ್ಕೃತ 12 ಜನ ಶಿಕ್ಷಕರಿಗೆ ಸನ್ಮಾನ‌

Update: 2025-11-02 18:30 IST

ಯಾದಗಿರಿ: ಕರ್ನಾಟಕದ ಏಕಿಕರಣದ ರೂವಾರಿ ಆಲೂರು ವೆಂಕಟರಾಯರು ಅಂದು ಚಳುವಳಿಯ ಕಿಚ್ಚು ಹಚ್ಚಿ ಪತ್ರಿಕೆಯೊಂದರಲ್ಲಿ ಬರೆದ ಲೇಖನ ಮತ್ತು ಸಮಾನ ಮನಸ್ಕರು ಮಾಡಿದ ತ್ಯಾಗದ ಹೋರಾಟದ ಫಲವೇ ಕರ್ನಾಟಕ ರಾಜ್ಯದ ಉದಯಕ್ಕೆ ಕಾರಣವಾಯಿತೆಂದು ಹಿರಿಯ ಸಾಹಿತಿ, ನಿವೃತ ಉಪನ್ಯಾಸಕ ವೆಂಕಟರಾವ್‌ ಕುಲಕರ್ಣಿ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಕಸಾಪ ಸಭಾಂಗಣದಲ್ಲಿ ರವಿವಾರ ಜಿಲ್ಲಾ ಮತ್ತು ತಾಲೂಕು ಕಸಾಪ‌ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಮತ್ತು 2025 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ಏಕಿಕರಣ ಚಳುವಳಿ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉತ್ತಮ‌ ಸಮಾಜ‌ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಿದ ಕನ್ನಡ ಅಧ್ಯಾಪಕ ಡಾ.ಡಿ.ಎನ್.ಪಾಟೀಲ್, ಸಭ್ಯ, ಸಶಕ್ತ, ಸಂಸ್ಕ್ರತಿಯುಳ್ಳ ಸಮಾಜದ ನಿರ್ಮಾಣದ ರುವಾರಿಗಳೇ ಶಿಕ್ಷಕರೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಬಿಇಒ ವಿ.ಜಿ.ಕನ್ನಳ್ಳಿ, ಸಾನಿಧ್ಯ ವಹಿಸಿದ್ದ ವಿಶ್ವಕರ್ಮ‌ ಏಕದಂಡಿಗಿ ಮಠದ ಕುಮಾರ ಸ್ವಾಮಿಗಳು ಮಾತನಾಡಿದರು.

ಜಿಲ್ಲಾ‌ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಸಕ್ರೆಪ್ಪ ಮಾಮನಿ, ಬಸವರಾಜ ಸಾಹು, ಶಿವಪ್ಪ ದಾಸನಕೇರಿ, ಹಸನ್ ಸಾಬ್, ಶಹಾಪುರ ತಾಲೂಕು ಅಧ್ಯಕ್ಷ ಡಾ.ರವಿಂದ್ರ ಹೊಸಮನಿ, ಯಾದಗಿರಿ ತಾಲೂಕು ಅಧ್ಯಕ್ಷ ವೆಂಕಟೇಶ ಕಲಕಂಭ ಅತಿಥಿಗಳಾಗಿದ್ದರು. ಇದೇ ವೇಳೆ 12 ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕ ಎಸ್.ಎಸ್. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News