ಯಾದಗಿರಿ | ಬುದ್ಧವಾಸಿ ದೇವೇಂದ್ರ ಹೆಗಡೆ ಸ್ಮರಣಾರ್ಥ “ನುಡಿ ನಮನ” ಕಾರ್ಯಕ್ರಮ
ಯಾದಗಿರಿ: ಬೌದ್ಧ ಸಾಹಿತಿ, ದಲಿತ ಸಮುದಾಯದ ಹಿರಿಯ ಜೀವಿ ಹಾಗೂ ದಲಿತ ಚಳುವಳಿಯ ಮುಂಚೂಣಿ ಹೋರಾಟಗಾರರಾದ ಬುದ್ಧವಾಸಿ ದೇವೇಂದ್ರ ಹೆಗಡೆ ಅವರ ಸ್ಮರಣಾರ್ಥ “ನುಡಿ ನಮನ” ಕಾರ್ಯಕ್ರಮವನ್ನು ಯಾದಗಿರಿಯಲ್ಲಿ ಆಯೋಜಿಸಲಾಗಿದೆ.
ಬೌದ್ಧ ಉಪಾಸಕ ಉಪಾಸಿಕರ ಸಂಘ ಹಾಗೂ ದಲಿತ ಒಕ್ಕೂಟ ಸಮಿತಿಯ ಆಶ್ರಯದಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮವು ಸೆ.28ರ, ಭಾನುವಾರ ಬೆಳಿಗ್ಗೆ 10 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಲಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಮರೇಪ್ಪ ಚಟ್ಟೇರಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಜಿಲ್ಲೆಯ ಬೌದ್ಧ ಉಪಾಸಕ, ಉಪಾಸಿಕಿಯರು, ದಲಿತ ಒಕ್ಕೂಟ ಸಮಿತಿ ಸದಸ್ಯರು, ಚಿಂತಕರು, ವಿಚಾರವಂತರು ಹಾಗೂ ಬಾಬಾಸಾಹೇಬರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಸಂಘಟಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರ್ವಜನಿಕರ ಸಹಕಾರ ಕೋರಿದ್ದು, ಇದು ದೇವೇಂದ್ರ ಹೆಗಡೆ ಅವರ ತತ್ವ, ಚಿಂತನೆ ಹಾಗೂ ದಲಿತ ಚಳುವಳಿಗೆ ಅವರು ನೀಡಿದ ಶ್ರೇಷ್ಠ ಕೊಡುಗೆಗಳನ್ನು ಸ್ಮರಿಸುವ ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.