ಯಾದಗಿರಿ | ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಮೃತ ತಾಯಪ್ಪ ಕುಟುಂಬಕ್ಕೆ ಚೆಕ್ ವಿತರಣೆ
ಯಾದಗಿರಿ: ನುಡಿದಂತೆಯೇ ಸಚಿವ ಸಂತೋಷ ಲಾಡ್ ನಡೆದುಕೊಂಡಿದ್ದು, ಕೆಲ ದಿನಗಳ ಹಿಂದೆ ಇಲ್ಲಿನ ಮೃತ ತಾಯಪ್ಪ ಕುಟುಂಬಕ್ಕೆ ಭೇಟಿ ನೀಡಿ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದಂತೆಯೇ ಇಂದು ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಸಹಾಯ ಮಾಡಲಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಸೋಮವಾರ ತಾಯಪ್ಪನ ಮನೆಗೆ ತೆರಳಿದ ಶಾಸಕರು ಫೌಂಡೇಶನ್ ದಿಂದ ಕಳುಹಿಸಿದ್ದ ಚೆಕ್ ವಿತರಿಸಿ ಮಾತನಾಡಿದರು.
ಕಾರ್ಮಿಕರ ಸ್ಮಾರ್ಟ್ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಸಂತೋಷ ಲಾಡ್ ಅವರು ನಮ್ಮ ಮನೆಗೆ ಉಪಹಾರ ಸೇವಿಸಲು ಆಗಮಿಸಿದಾಗ ಪಕ್ಕದಲ್ಲಿ ತಾಯಪ್ಪ ಮೃತಪಟ್ಟ ವಿಷಯ ತಿಳಿದು ಕೂಡಲೇ ಅಲ್ಲಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು ಮತ್ತು ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಇಂದು ಆ ಕುಟುಂಬಕ್ಕೆ ನೀಡಲಾಗಿದೆ ಶಾಸಕರು ಹೇಳಿದರು.
ಇಂದಿನ ಕಾಲದಲ್ಲಿ ಕೇವಲ ಭರವಸೆ ನೀಡುವ ವ್ಯಕ್ತಿಗಳ ನಡುವೆ ನಮ್ಮ ಸಚಿವ ಲಾಡ್ ಅವರು ಬಡವರ ಮೇಲೆ ಇಟ್ಟ ಕಾಳಜಿ ಮೆಚ್ಚುವಂತಹದ್ದು ಎಂದರು.
ಈ ವೇಳೆ ಸಂತೋಷ್ ಲಾಡ್ ಟ್ರಸ್ಟ್ ನ ಅನಿಲ್ ಕುಮಾರ, ಯೂಥ್ ಕಾಂಗ್ರೆಸ್ ಸ್ಟೇಟ್ ಸೆಕ್ರೆಟರಿ ದೀಪಕ್ ರಾಜ್, ಮಲ್ಲಿಕಾರ್ಜುನ ಗೌಡರೆಡ್ಡಿ, ಗುರಬಸಪ್ಪ ಗುಂಡಳ್ಳಿ, ಇದ್ದರು.