×
Ad

ಯಾದಗಿರಿ | ಸಿಎಂ ಹುದ್ದೆಯೇ ಬೇಡ ಎಂದಿದ್ದ ಕೂಲೂರು ಮಲ್ಲಪ್ಪಾಜೀ: ಮರಿಲಿಂಗಪ್ಪ ಸಾಹುಕಾರ ಕುಮನೂರು

Update: 2025-09-17 18:51 IST

ಯಾದಗಿರಿ: ಜವಾಹರಲಾಲ್‌ ನೆಹರೂ ಕೂಲೂರು ಮಲ್ಲಪ್ಪಾಜೀ ಅವರನ್ನು ತನ್ನ ಸಂಪುಟದ ಮಂತ್ರಿ ಮಾಡಲು ಆಹ್ವಾನಿಸಿದರೂ ಅವರು ಅದನ್ನು ನಯವಾಗಿ ತಿರಸ್ಕರಿಸಿದರು. ಬಳಿಕ ಇಂದಿರಾ ಗಾಂಧಿಯವರು ಮುಖ್ಯಮಂತ್ರಿ ಹುದ್ದೆ ನೀಡಲು ಮುಂದಾದರೂ ಮಲ್ಲಪ್ಪಾಜೀ ಅದನ್ನೂ ಒಪ್ಪಲಿಲ್ಲ. “ತಮ್ಮ ಶಕ್ತಿ-ಸಾಮರ್ಥ್ಯ, ರಾಜಕೀಯ ಮಿತಿಯನ್ನು ಅರಿತುಕೊಂಡ ದೊಡ್ಡ ಔದಾರ್ಯತೆ ಅವರದು” ಎಂದು ಮಾಜಿ ತಾಲೂಕು ಪಂಚಾಯತ್‌ ಸದಸ್ಯ ಮರಿಲಿಂಗಪ್ಪ ಸಾಹುಕಾರ ಕುಮನೂರು ಅಭಿಪ್ರಾಯಪಟ್ಟರು.

ಯಾದಗಿರಿ ನಗರದಲ್ಲಿ ಕೂಲೂರು ಮಲ್ಲಪ್ಪಾಜೀ ಅಭಿಮಾನಿ ಬಳಗದಿಂದ ಆಯೋಜಿಸಲಾದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ, ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ-ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಹೈದರಾಬಾದ್ ಕರ್ನಾಟಕ ವಿಮೋಚನೆ ಚಳುವಳಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ ಹೋರಾಟಗಾರರ ಸಾಲಿನಲ್ಲಿ ಮಲ್ಲಪ್ಪಾಜೀ ಅಗ್ರಗಣ್ಯರು. ಅವರನ್ನು ‘ಹೈದರಾಬಾದ್ ಕರ್ನಾಟಕದ ಗಾಂಧಿ’, ‘ದಕ್ಷಿಣ ಭಾರತದ ಭೀಷ್ಮ’ ಎಂದೂ ಕರೆಯಲಾಗುತ್ತದೆ ಎಂದು ಕುಮನೂರು ಹೇಳಿದರು.

ಅಭಿಮಾನಿ ಬಳಗದ ಅಧ್ಯಕ್ಷ ಹಣಮಂತರಾಯಗೌಡ ಮಾಲಿಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಳ್ಳೆಸೂಗುರು ಗ್ರಾಮ ಪಂಚಾಯತ್‌ ಅಧ್ಯಕ್ಷ ಶರಣಪ್ಪ, ಭೀಮಣ್ಣ ಪೂಜಾರಿ (ಲಕ್ಷ್ಮಂಪೂರ), ಗ್ರಾಮ ಪಂಚಾಯತ್ ಸದಸ್ಯ ಬಸವರಾಜ್ ಕಾವಲಿ, ಹೊನ್ನಪ್ಪ ಯಡ್ಡಳ್ಳಿ (ಹಾಲಗೇರಾ), ನಿಂಗಣ್ಣ ಜಡಿ, ರಾಜೀವ್ ಶಿವರಾಜ್ ನಾಯ್ಕೋಡಿ, ಕಾಳಪ್ಪ ಹೊರಟುರ, ಬೀರಲಿಂಗಪ್ಪ ಕಿಲ್ಲನಕೇರಾ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News