Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯತ್ನಾಳ್-ವಿಜಯೇಂದ್ರ ಭೇಟಿ: ಹಿಂದೆ...

ಯತ್ನಾಳ್-ವಿಜಯೇಂದ್ರ ಭೇಟಿ: ಹಿಂದೆ ನಡೆದದ್ದೆಲ್ಲವೂ ಕೇವಲ ರಾಜಕೀಯ ಪ್ರದರ್ಶನವಾಗಿತ್ತೇ ?

ಮುಹಮ್ಮದ್ ರಫೀಕ್, ಬೀಳಗಿಮುಹಮ್ಮದ್ ರಫೀಕ್, ಬೀಳಗಿ19 Oct 2026 11:34 AM IST
share
ಯತ್ನಾಳ್-ವಿಜಯೇಂದ್ರ ಭೇಟಿ: ಹಿಂದೆ ನಡೆದದ್ದೆಲ್ಲವೂ ಕೇವಲ ರಾಜಕೀಯ ಪ್ರದರ್ಶನವಾಗಿತ್ತೇ ?

ಹುಬ್ಬಳ್ಳಿ: ವೇದಿಕೆ ಸಿಕ್ಕಾಗಲೆಲ್ಲ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಹರಿಹಾಯುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಅದೇ ವಿಜಯೇಂದ್ರ ಅವರೊಂದಿಗೆ ಮುಖಾಮುಖಿ ಕುಳಿತು ಸೌಹಾರ್ದದ ಮಾತುಕತೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದಿಂದ ತಮ್ಮನ್ನು ಉಚ್ಚಾಟಿಸಲು ಪ್ರಮುಖ ಕಾರಣರಾದ ವಿಜಯೇಂದ್ರ ಅವರನ್ನೇ ಯತ್ನಾಳ್ ಭೇಟಿಯಾಗಿ ಕುಶಲೋಪರಿ ವಿಚಾರಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇತ್ತೀಚೆಗಷ್ಟೇ ಯತ್ನಾಳ್, ವಿಜಯೇಂದ್ರ ಅವರನ್ನು ಉದ್ದೇಶಿಸಿ "ನಾಲಾಯಕರ ಗುರು ವಿಜಯೇಂದ್ರ, ನವೆಂಬರ್‌ನಲ್ಲಿ ಅವನನ್ನು ಕಿತ್ತು ಹಾಕುತ್ತಾರೆ", "ಅಪ್ಪನದ್ದೇ ಸಿಡಿ ಮಾಡಿ ಬೆದರಿಸುತ್ತಾನೆ" ಎಂಬಂತಹ ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದರು. ಅದೇ ಯತ್ನಾಳ್ ಇಂದು ವಿಜಯೇಂದ್ರ ಎದುರು ಸೌಜನ್ಯದಿಂದ ವರ್ತಿಸಿರುವುದು, "ಇದೀಗ ನಾಲಾಯಕ್ ಯಾರು?" ಎಂಬ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಮೂಡಿಸಿದೆ.

ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಮತ್ತು ಮುಖಾಮುಖಿ ಮಾತುಕತೆ ಸಹಜ. ಆದರೆ, ಸಾರ್ವಜನಿಕವಾಗಿ ಒಬ್ಬ ನಾಯಕನ ತಂದೆಯ ಕುರಿತೇ ಸಿಡಿ ಆರೋಪದಂತಹ ಗಂಭೀರ ಮತ್ತು ವೈಯಕ್ತಿಕ ದಾಳಿ ನಡೆಸಿದ ಬಳಿಕ, ಯಾವುದೇ ಸ್ಪಷ್ಟೀಕರಣವಿಲ್ಲದೆ ಭೇಟಿಯಾಗುವುದು ರಾಜಕೀಯ ಸಿದ್ಧಾಂತದ ಬದ್ಧತೆಯನ್ನು ಪ್ರಶ್ನಿಸುವಂತಿದೆ.

ಉಭಯ ನಾಯಕರಿಗೂ ಪ್ರಶ್ನೆ:

ಈ ಭೇಟಿಯಿಂದ ಎರಡೂ ಕಡೆ ಪ್ರಶ್ನೆಗಳು ಎದ್ದಿವೆ. ತಮ್ಮ ಮತ್ತು ತಮ್ಮ ತಂದೆಯ ವಿರುದ್ಧ ಇಷ್ಟೊಂದು ಕೆಟ್ಟ ಪದಗಳಲ್ಲಿ ನಿಂದಿಸಿದ್ದ ವ್ಯಕ್ತಿಯನ್ನು ಭೇಟಿ ಮಾಡುವ ಮೂಲಕ, ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಂತಾಯಿತೇ? ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಕನಿಷ್ಠ ಮಾತಿನ ಘನತೆ ಬೇಡವೇ ಎಂದು ಕೇಳಿದವರಿಗೆ ವಿಜಯೇಂದ್ರ ಅವರ ಉತ್ತರ ಏನು? ತಾವು ಮಾಡಿದ ಆರೋಪಗಳಿಗೆ ಈಗ ಏನು ವಿವರಣೆ? ವಿಜಯೇಂದ್ರ ನಾಯಕತ್ವ ಸರಿಯಿಲ್ಲ ಎಂಬ ತಮ್ಮ ಹಿಂದಿನ ನಿಲುವು ಈಗ ಎಲ್ಲಿ ಹೋಯಿತು? ನಿಮ್ಮ ವಿರೋಧ ಸೈದ್ಧಾಂತಿಕವಾಗಿತ್ತೇ ಅಥವಾ ಕೇವಲ ರಾಜಕೀಯ ಲೆಕ್ಕಾಚಾರವಾಗಿತ್ತೇ ಎನ್ನುವ ಪ್ರಶ್ನೆಗೆ ಯತ್ನಾಳ್ ಉತ್ತರಿಸಬೇಕಿದೆ.

ಇದು ಯತ್ನಾಳ್ ಅವರ ಮೊದಲ ವಾಗ್ದಾಳಿಯಲ್ಲ. ಯಡಿಯೂರಪ್ಪ ಕುಟುಂಬವನ್ನು "ಪೂಜ್ಯ ತಂದೆ-ಮಗ" ಎಂದು ವ್ಯಂಗ್ಯವಾಡುತ್ತಾ ಟವೆಲ್‌ನಲ್ಲಿ ಸುತ್ತಿ ಹೊಡೆದಂತೆ ಮಾತನಾಡುವುದು ಅವರ ಶೈಲಿಯಾಗಿತ್ತು. ಇದೇ ಕಾರಣಕ್ಕೆ ಅವರು ಪಕ್ಷದಲ್ಲೂ ವಿವಾದಕ್ಕೀಡಾಗಿದ್ದರು. ಹಿಂದೂ-ಮುಸ್ಲಿಂ ವಿಚಾರ, ಧಾರ್ಮಿಕ ಹೇಳಿಕೆಗಳಿಂದ ಈಗಾಗಲೇ ಹಲವು ಪೊಲೀಸ್ ದೂರುಗಳನ್ನು ಎದುರಿಸುತ್ತಿರುವ ಯತ್ನಾಳ್ ಅವರ ಈ ನಡೆ ಅವರ ರಾಜಕೀಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ.

ಒಟ್ಟಾರೆ, ವೇದಿಕೆ ಮೇಲೆ ಒಂದು ಮಾತು, ಮುಖಾಮುಖಿಯಲ್ಲಿ ಮತ್ತೊಂದು ಮಾತು ಎಂಬ ಈ ದ್ವಂದ್ವ ನಿಲುವಿಗೆ ಉಭಯ ನಾಯಕರು ಸಾರ್ವಜನಿಕವಾಗಿ ಉತ್ತರಿಸಬೇಕಿದೆ. ಇಲ್ಲದಿದ್ದರೆ ನಡೆದದ್ದೆಲ್ಲ ಕೇವಲ ರಾಜಕೀಯ ಪ್ರದರ್ಶನವಾಗಿತ್ತೇ ಎಂಬ ಅನುಮಾನ ಜನರಲ್ಲಿ ಗಟ್ಟಿಯಾಗುವುದು ಸಹಜ.

share
ಮುಹಮ್ಮದ್ ರಫೀಕ್, ಬೀಳಗಿ
ಮುಹಮ್ಮದ್ ರಫೀಕ್, ಬೀಳಗಿ
Next Story
X