‘ವಾರ್ತಾ ಭಾರತಿ’ ಅನಿವಾಸಿ ಕನ್ನಡಿಗರು ಅಭಿಪ್ರಾಯ ಹಂಚಿಕೊಳ್ಳಲು ಉತ್ತಮ ವೇದಿಕೆ: ಕನ್ನಡ ಸಂಘ ಇಟಲಿ ಅಧ್ಯಕ್ಷ ಹೇಮೇಗೌಡ ರುದ್ರಪ್ಪ
ವಾರ್ತಾಭಾರತಿಗೆ 24ರ ಸಂಭ್ರಮ

ಇಟಲಿ: ಪತ್ರಿಕೋದ್ಯಮದಲ್ಲಿ 23 ವರ್ಷಗಳನ್ನು ಪೂರೈಸಿ, 24ನೇ ವರ್ಷಕ್ಕೆ ಕಾಲಿಡುತ್ತಿರುವ ‘ವಾರ್ತಾ ಭಾರತಿ’ ಪತ್ರಿಕೆಗೆ ಹೃತ್ಪೂರ್ವಕ ಅಭಿನಂದನೆಗಳು.
ಇಟಲಿಯಲ್ಲಿರುವ ಎಲ್ಲ ಕನ್ನಡಿಗರ ಪರವಾಗಿ ‘ವಾರ್ತಾ ಭಾರತಿ’ಗೆ ಶುಭ ಹಾರೈಸುತ್ತೇವೆ. ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಾಗೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ‘ವಾರ್ತಾ ಭಾರತಿ’ ಉತ್ತಮ ವೇದಿಕೆಯನ್ನು ಒದಗಿಸಿದೆ.
ಸಮುದಾಯದ ಹಾಗೂ ನಮ್ಮ ಕನ್ನಡಿಗರ ಒಳಿತಿಗಾಗಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ, ಅವರಿಗೆ ಬೆಂಬಲ ನೀಡುತ್ತಿರುವ ‘ವಾರ್ತಾ ಭಾರತಿ’ಗೆ ನಮ್ಮ ಧನ್ಯವಾದಗಳು.
ಹೇಮೇಗೌಡ ರುದ್ರಪ್ಪ, ಅಧ್ಯಕ್ಷರು, ಇಟಲಿ ಕನ್ನಡ ಸಂಘ, ಟೊರಿನೊ
Next Story




