ಸಮಾಜಕ್ಕೆ ಕನ್ನಡಿ

ನನಗೀಗ 90ರ ಹರೆಯ. ಬೆಳಗ್ಗೆ ಎದ್ದೊಡನೆ ಎರಡು ಕನ್ನಡ ಮತ್ತು ಒಂದು ಇಂಗ್ಲಿಷ್ ಪತ್ರಿಕೆಯನ್ನು ನನಗೆ ಓದಲೇಬೇಕು. ಮೊದಲು ನಾನು ‘ವಾರ್ತಾಭಾರತಿ’ ಪತ್ರಿಕೆಯನ್ನು ಕೈಗೆತ್ತಿಕೊಂಡು ಓದತೊಡಗುವೆ. ಯಾವೊಂದು ಸುದ್ದಿಯನ್ನೂ ಬಿಡದೆ ಓದುವುದು ನನ್ನ ಹವ್ಯಾಸ. ‘ವಾರ್ತಾಭಾರತಿ’ ಆರಂಭಗೊಂಡ ದಿನದಿಂದ ಈ ಪರಿಪಾಠ ಬೆಳೆಸಿಕೊಂಡಿರುವೆ. ಒಂದು ದಿನವೂ ‘ವಾರ್ತಾಭಾರತಿ’ ಓದದೆ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಅವಿನಾಭಾವ ಸಂಬಂಧವನ್ನು ನಾನು ಇದರ ಜೊತೆ ಬೆಳೆಸಿಕೊಂಡಿರುವೆ. ಇದನ್ನು ಕೇವಲ ಪತ್ರಿಕೆ ಅಂತ ಹೇಳಲು ನನಗೆ ಮನಸ್ಸಾಗುತ್ತಿಲ್ಲ. ಯಾಕೆಂದರೆ ಇದರಲ್ಲಿ ಬರುವ ಅನೇಕ ಲೇಖನಗಳು ಸಮಾಜಕ್ಕೆ ಕನ್ನಡಿಯಾಗಿದೆ. ಇದ್ದುದನ್ನು ಇದ್ದಹಾಗೆ, ಯಾವ ಮುಚ್ಚುಮರೆಯೂ ಇಲ್ಲದೆ ವಾಸ್ತವ ಸಂಗತಿಯನ್ನು ಜನರಿಗೆ ದಾಟಿಸುವಲ್ಲಿ ‘ವಾರ್ತಾಭಾರತಿ’ ಯಶಸ್ವಿಯಾಗಿದೆ ಎಂದು ನಾನು ಭಾವಿಸುವೆ. 24ಕ್ಕೆ ಕಾಲಿಡುವ ‘ವಾರ್ತಾಭಾರತಿ’ಗೆ ಶುಭ ಕೋರುವೆ.
Next Story




