ನಿರ್ಭೀತ ಪತ್ರಿಕೋದ್ಯಮ, ಜನಪರ ನಿಲುವಿನಿಂದ ಜನಮನದಲ್ಲಿ ನೆಲೆಸಿದ ʼವಾರ್ತಾ ಭಾರತಿʼ: ಮನ್ಸೂರ್ ಅಹ್ಮದ್ ಆಝಾದ್
ವಾರ್ತಾಭಾರತಿಗೆ 24ರ ಸಂಭ್ರಮ

ಮಂಗಳೂರು: ʼವಾರ್ತಾ ಭಾರತಿʼ ಪತ್ರಿಕೆಯ ಅದ್ಭುತ ಪಯಣಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.
ಸತ್ಯವಾದ ಪತ್ರಿಕೋದ್ಯಮ, ನಿರ್ಭೀತ ವರದಿಗಾರಿಕೆ, ಸಮತೋಲಿತ ದೃಷ್ಟಿಕೋನ ಹಾಗೂ ಸಾಮಾಜಿಕ ಬದ್ಧತೆಯಿಂದ ʼವಾರ್ತಾ ಭಾರತಿʼ ಓದುಗರ ಮನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಪ್ರಮುಖ ವಿಷಯಗಳನ್ನು ಜನರಿಗೆ ತಲುಪಿಸುವುದರ ಜತೆಗೆ, ಧ್ವನಿಯಿಲ್ಲದವರಿಗೆ ಧ್ವನಿಯಾಗುವ ಪತ್ರಿಕೆಯ ಪ್ರಯತ್ನ ಶ್ಲಾಘನೀಯ.
ಸತ್ಯ, ನ್ಯಾಯ, ಸಮಗ್ರತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ʼವಾರ್ತಾ ಭಾರತಿʼ ಸದಾ ಎತ್ತಿಹಿಡಿಯಲಿ. ಮುಂದಿನ ದಿನಗಳಲ್ಲೂ ಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.
ʼವಾರ್ತಾ ಭಾರತಿʼ ನಿರಂತರವಾಗಿ ಯಶಸ್ಸು ಕಾಣಲಿ. ಜನ ಸೇವೆಯನ್ನು ಮುಂದುವರಿಸುತ್ತಾ ಇನ್ನೂ ಹಲವು ವರ್ಷಗಳ ಕಾಲ ಮುನ್ನಡೆಯಲಿ. ವಾರ್ತಾ ಭಾರತಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.
-ಮನ್ಸೂರ್ ಅಹ್ಮದ್ ಆಝಾದ್, ಮಂಗಳೂರು
Next Story




