‘ವಾರ್ತಾ ಭಾರತಿ’ ಜವಾಬ್ದಾರಿಯುತ ಪತ್ರಿಕೋದ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ: ಮುಹಮ್ಮದ್ ಅಲಿ ಉಚ್ಚಿಲ್
ವಾರ್ತಾಭಾರತಿಗೆ 24ರ ಸಂಭ್ರಮ

ಅಬುಧಾಬಿ: ನಿರ್ಭೀತ ಪತ್ರಿಕೋದ್ಯಮದ 24ನೇ ವರ್ಷಕ್ಕೆ ‘ವಾರ್ತಾ ಭಾರತಿ’ಗೆ ಹಾರ್ದಿಕ ಅಭಿನಂದನೆಗಳು. ಕಳೆದ ಎರಡು ದಶಕಗಳಿಂದಲೂ ಸತ್ಯ, ಜನರ ಧ್ವನಿ ಹಾಗೂ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ‘ವಾರ್ತಾ ಭಾರತಿ’, ಇದೀಗ 24ನೇ ವರ್ಷಕ್ಕೆ ಕಾಲಿಡುತ್ತಿರುವುದು ಹೆಮ್ಮೆಯ ಸಂಗತಿ.
ನಿರ್ಭೀತ ಹಾಗೂ ನಿಷ್ಪಕ್ಷಪಾತ ವರದಿಗಾರಿಕೆಯ ಮೂಲಕ ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿರುವ ಕನ್ನಡಿಗ ಓದುಗರ ವಿಶ್ವಾಸವನ್ನು ಗಳಿಸಿರುವ ‘ವಾರ್ತಾ ಭಾರತಿ’ಗೆ ಹೃತ್ಪೂರ್ವಕ ಅಭಿನಂದನೆಗಳು.
ಮುಂದೆಯೂ ಸತ್ಯದ ಪರವಾಗಿ, ಜನರ ಧ್ವನಿಯಾಗಿ, ಜವಾಬ್ದಾರಿಯುತ ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿದು ಮತ್ತಷ್ಟು ಯಶಸ್ವಿಯಾಗಿ ಮುನ್ನಡೆಯಲಿ ಎಂಬ ಶುಭ ಹಾರೈಕೆ ಹಾರೈಕೆ.
-ಮಹಮ್ಮದ್ ಅಲಿ ಉಚ್ಚಿಲ್, ಅಧ್ಯಕ್ಷರು, ಬ್ಯಾರೀಸ್ ವೆಲ್‌ಫೇರ್ ಫೋರಂ, ಅಬುಧಾಬಿ
Next Story




