Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ವಾರ್ತಾಭಾರತಿಗೆ 24ರ ಸಂಭ್ರಮ
  4. ಚಿತ್ತ ಭಿತ್ತಿಯ ‘ವಾರ್ತಾಭಾರತಿ’

ಚಿತ್ತ ಭಿತ್ತಿಯ ‘ವಾರ್ತಾಭಾರತಿ’

ಡಾ. ಜ್ಯೋತಿ, ಚೇಳಾರುಡಾ. ಜ್ಯೋತಿ, ಚೇಳಾರು29 Aug 2026 11:53 AM IST
share
ಚಿತ್ತ ಭಿತ್ತಿಯ ‘ವಾರ್ತಾಭಾರತಿ’

ಇಂದು 24ನೇ ವರ್ಷಕ್ಕೆ ಕಾಲಿಡುವ ಸಂಭ್ರಮದಲ್ಲಿರುವ ಜನದನಿಯ ಸಾರಥಿ ‘ವಾರ್ತಾಭಾರತಿ’ಯ ಜೊತೆಯಾದ ನಾಡಿನ ಹಿರಿಯ ಲೇಖಕರು, ಚಿಂತಕರು

ಪತ್ರಿಕೆ ಇದುವರೆಗೆ ನಡೆದುಕೊಂಡು ಬಂದ ಹಾದಿ, ಅದರ ಜನಪರ ಕಾಳಜಿ, ಬದ್ಧತೆ, ಭವಿಷ್ಯದ ಭರವಸೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯೊಂದು ಜನಸಾಮಾನ್ಯರ ಆಲೋಚನೆಯ ಗ್ರಹಿಕೆಯ ಭಾಗವಾಗಿ ಬೆಳೆಯುವುದು ಸುಲಭವಾದ ಸಾಧನೆಯಲ್ಲ. ಪತ್ರಿಕೆ ಕೇವಲ ಸುದ್ದಿಯ ಮಾಧ್ಯಮವಾಗದೆ ವಿಚಾರಗಳ ಅಭಿವ್ಯಕ್ತಿಯಿಂದ ವೈಚಾರಿಕತೆ, ಸಮಾನತೆಯ ಆಶಯವನ್ನು ಪ್ರತಿಪಾದಿಸುತ್ತಾ ಎಲ್ಲರನ್ನು ಒಳಗೊಳ್ಳುವಂತೆ ತನ್ನನ್ನು ತಾನು ಆವರಿಸಿಕೊಳ್ಳುವುದು ಮುಖ್ಯವಾಗುತ್ತದೆ. ವಾರ್ತಾಭಾರತಿ ಆ ಹಿನ್ನೆಲೆಯಲ್ಲಿ ಕೇವಲ ಹೆಸರಿನಿಂದಷ್ಟೇ ಅಲ್ಲದೆ ಭಾರತೀಯತೆಯನ್ನು ಪ್ರತಿಪಾದಿಸುತ್ತಲೇ ಬಂದಿದೆ. ಸಂವಿಧಾನ ಭಾರತೀಯರಿಗೆ ಕೊಟ್ಟಿರುವ ಅಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ಅದನ್ನು ಬಳಸಿಕೊಳ್ಳುವ ಧೈರ್ಯ ಮತ್ತು ಸ್ಥ್ಯೆರ್ಯಗಳೊಂದಿಗೆ ಸೌಹಾರ್ದತಾ ಪರಂಪರೆಯ ಆಶಯವೂ ಆ ಹಿನ್ನೆಲೆಯಲ್ಲಿರುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಓದುಗನೊಬ್ಬ ಪತ್ರಿಕೆಯೊಂದನ್ನು ಯಾಕೆ ಕೈಗೆತ್ತಿಕೊಳ್ಳುತ್ತಾನೆ ಮತ್ತು ಅದರಿಂದ ಆತ ಪಡೆಯುವ ಪ್ರತಿಫಲಾಪ್ರೇಕ್ಷೆ ಯಾವುದು ಎಂಬುದು ಮಹತ್ವದ ಪ್ರಶ್ನೆ. ಯಾಕೆಂದರೆ ಇಂದು ಜಗತ್ತು ತುದಿಬೆರಳಲ್ಲಿದೆ. ಆದರೆ ಸುದ್ದಿಯೊಂದು ಜನರಿಗೆ ತಲುಪುವ ಮತ್ತು ಅದು ಜನರನ್ನು ಪರಿಭಾವಿಸುವ ಪರಿಭಾಷೆ ಎಷ್ಟು ಸಂಕೀರ್ಣವಾದುದು ಎನ್ನುವುದು ಪತ್ರಿಕಾಧರ್ಮದ ಒಳಗೆ ಬಹಳಷ್ಟು ಚರ್ಚಿತವಾಗುವ ಸಂಗತಿಗಳೇ ಆಗಿವೆ. ನನ್ನ ಆಯ್ಕೆ ಈ ಪತ್ರಿಕೆ ಎಂದು ಓದುಗನೊಬ್ಬ ನಿರ್ಧರಿಸಬೇಕಾದರೆ ಆ ಪತ್ರಿಕೆ ಕೊಡುವ ಹೊಸತನ ತಟ್ಟುವ ಸೂಕ್ಷ್ಮ ಸಂವೇದನೆಯ ಹಿನ್ನೆಲೆಯೂ ಇದೆ. ಉಳಿದ ಪತ್ರಿಕೆಗಳು ಕೊಡುತ್ತಿರುವ ಸುದ್ದಿ ವರದಿಯಾಗದ ಸೂಕ್ಷ್ಮ ಎಳೆಗಳು ಇಲ್ಲಿ ನಿಚ್ಚಳವಾಗಿ ಬೆಳಕು ಕಾಣುತ್ತವೆ ಎಂಬುದು ಸಾಪೇಕ್ಷವಾದ ಸತ್ಯ.ಮರೆಯಾಗುವ ಸಂಗತಿಗಳು ಜನಭಿತ್ತಿಯೊಳಗೆ ದಾಖಲಾಗುವುದು ಮತ್ತು ಆ ಮೂಲಕ ಜನ ಜಾಗೃತಿಯನ್ನು, ಎಚ್ಚರವನ್ನು ಹುಟ್ಟಿಸುತ್ತದೆ. ಈ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ಎಲ್ಲವನ್ನು ಸಮಾನತೆಯ ಹಿನ್ನೆಲೆಯಲ್ಲಿಯೇ ಪ್ರತಿಪಾದಿಸುತ್ತಾ ಬಂದಿದೆ.

ಎಲ್ಲಾ ಪತ್ರಿಕೆಗಳಿಗೂ ಅವುಗಳದ್ದೇ ಆದ ಸಿದ್ಧಾಂತಗಳಿರುತ್ತವೆ. ಎಡಪಂಥೀಯ ಅಥವಾ ಬಲಪಂಥೀಯ ಚಿಂತನೆಗಳೊಂದಿಗೆ ವ್ಯಾವಹಾರಿಕ ಉದ್ದೇಶಗಳೊಂದಿಗೆ ಲಾಭಕ್ಕಾಗಿಯೇ ಪತ್ರಿಕೆಯನ್ನು ನಡೆಸುವುದು ಕೆಲವು ಬಂಡವಾಳಶಾಹಿಗಳ ಚಿಂತನೆಯಾಗಿರುತ್ತದೆ. ತಮ್ಮ ವಿಚಾರಗಳನ್ನು ಜನಪ್ರಿಯಗೊಳಿಸಲು ಮತ್ತು ಯಾವುದೋ ಒಂದು ರಾಜಕೀಯ ಪಕ್ಷದ ಮುಖವಾಣಿಯಾಗಿ ಅದರ ಏಜೆಂಟ್ ಎಂಬಂತೆ ಕಾರ್ಯನಿರ್ವಹಿಸುವ ಪತ್ರಿಕೆಗಳೂ ಇವೆ. ಅವೆೆಲ್ಲದ ಮಧ್ಯೆ ಬಂಡವಾಳಶಾಹಿ ಜಗತ್ತು ಮತ್ತು ಅಧಿಕಾರ ಕೇಂದ್ರದ ಪ್ರಭುತ್ವ ಇವೆರಡಕ್ಕೂ ಸವಾಲುಗಳನ್ನು ಒಡ್ಡಿ ಸ್ಥೈರ್ಯದಿಂದ ಮುನ್ನಡೆಯುವುದು ಪತ್ರಿಕೆಯೊಂದರ ಸಾಮರ್ಥ್ಯ. ಇಂತಹ ಕಾರ್ಯವನ್ನು ವಾರ್ತಾಭಾರತಿ ನಿರ್ವಹಿಸುತ್ತಾ ಬಂದಿದೆ ಎನ್ನುವುದು ಹೆಮ್ಮೆಯ ಸಂಗತಿ. ಅವಕಾಶ ವಂಚಿತವಾದ ಜನರ ಧ್ವ್ವನಿಯಾಗಿ ಎಲ್ಲವನ್ನು, ಎಲ್ಲರನ್ನು ಒಳಗೊಳ್ಳುವುದು ಸಾಧನೆಯ ಶಿಖರವೇ ಆಗಿದೆ.

ಬಹಳ ಮುಖ್ಯವಾಗಿ ಒಂದು ಪತ್ರಿಕೆ ಲೇಖಕರನ್ನು ಹೇಗೆ ಬೆಳೆಸುತ್ತದೆ ಎನ್ನುವುದಕ್ಕೆ ನಮ್ಮ ಮುಂದೆ ಹಲವಾರು ಮಾದರಿಗಳಿವೆ. ಜನರನ್ನು ಧ್ರುವೀಕರಿಸಿ ಮತ ಧರ್ಮದ ಹಿನ್ನೆಲೆಯಲ್ಲಿ ವಿಂಗಡಿಸಿ, ಅಂತಹ ವಿಚಾರಗಳ ಬಗ್ಗೆಯೇ ಪುಟಗಟ್ಟಲೆ ಬರೆದು ಪತ್ರಿಕೆ ಮತ್ತು ಲೇಖಕ ಇಬ್ಬರೂ ಲಾಭ ಮಾಡಿಕೊಂಡ ಉದಾಹರಣೆಗಳೊಂದಿಗೆ ಏರಿದ ಎತ್ತರಗಳು, ಪಡೆದ ಅಧಿಕಾರಗಳು ಇವೆಲ್ಲವೂ ಚರಿತ್ರೆಯ ಪುಟಗಳಲ್ಲಿ ದಾಖಲು. ಅವೆಲ್ಲದರ ಆಚೆಗೆ ಲಾಭ-ನಷ್ಟಗಳ ಆಚೆಗೆ ಸೌಹಾರ್ದ ಪರಂಪರೆಯನ್ನೇ ಪ್ರತಿಪಾದಿಸಿ ಅದನ್ನೇ ಸಾರ್ವಕಾಲಿಕ ಮೌಲ್ಯವಾಗಿಸಿ ಅದಕ್ಕೆ ಪೂರಕವಾದ ಚಟುವಟಿಕೆಯನ್ನು ಕ್ರಿಯಾಶೀಲಗೊಳಿಸುತ್ತಾ ವಾರ್ತಾಭಾರತಿ ಸಾಗಿದೆ. ಸಂಘರ್ಷಕ್ಕಿಂತ ಸಾಮರಸ್ಯ, ಸಹಬಾಳ್ವೆಯ ಮೌಲ್ಯದ ಮಹತ್ವ ಆರೋಗ್ಯಪೂರ್ಣ ಸಾಮಾಜಿಕ ಬದುಕಿನ ಎಳೆಎಳೆಯಾಗಿ ಹೆಣೆಯುತ್ತಾ ಸಾಗಿದೆ. ಹಾಗಾಗಿ ಬಹಳ ಅರ್ಥಪೂರ್ಣ ವೈಚಾರಿಕ ಬರಹಗಳು ಇಲ್ಲಿ ಬೆಳಕು ಕಂಡಿವೆ. ಬಹಳಷ್ಟು ಲೇಖಕರು ತಮ್ಮ ಪ್ರತಿಭೆ, ಸಾಮರ್ಥ್ಯಗಳಿಂದಲೂ ಪತ್ರಿಕೆಯ ಗುಣಮಟ್ಟವನ್ನು ಶ್ರೀಮಂತಗೊಳಿಸಿದ್ದಾರೆ.

ಕೊರೋನ ಪೂರ್ವ ಮತ್ತು ಕೊರೋನ ನಂತರದ ಕಾಲದಲ್ಲಿ ಆದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಬಿಕ್ಕಟ್ಟುಗಳ ನಡುವೆ ಪತ್ರಿಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಸವಾಲಿನ ಸಂಗತಿಯೇ ಆಗಿದೆ. ಪತ್ರಿಕೆ ತನ್ನ ನಿಜದ ಅರ್ಥದಲ್ಲಿ ತಲುಪಬೇಕಾದ ಗುರಿ ಮತ್ತು ಜಾಗೃತಿಯನ್ನು ನಾವು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಸ್ಪಷ್ಟವಾಗಿ ತಿಳಿದಿದ್ದೇವೆ. ಗಾಂಧೀಜಿ ಪತ್ರಿಕೆಯ ಮೂಲಕ ನಡೆಸಿದ ಚಳವಳಿ ಮತ್ತು ಆನಂತರದಲ್ಲಿ ಹುಟ್ಟಿಕೊಂಡ ಹಲವಾರು ಚಳವಳಿಗಳಲ್ಲಿ ಪತ್ರಿಕೆಗಳು ಮಹತ್ವದ ಸ್ಥಾನಗಳಿಸಿವೆೆ. ಜನನುಡಿಯ ತಾಯಿಬೇರಾದ ಪತ್ರಿಕೆಗಳು ಆ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಿದ ಪಾತ್ರ ಮಹತ್ವದ್ದು. ಜನಾಭಿಪ್ರಾಯಗಳನ್ನು ಅಭಿವ್ಯಕ್ತಿಯ ಪತ್ರಿಕೆಗಳ ಕತ್ತುಹಿಸುಕುವ ಮತ್ತು ಅವು ಮೊಳೆಯದಂತೆ ಮಾಡುವ ಹುನ್ನಾರಗಳ ಮಧ್ಯೆ ಅದನ್ನು ಉಳಿಸುವ ಮತ್ತು ಬಾಳಿಸುವ ಕೆಲಸವನ್ನು ‘ವಾರ್ತಾಭಾರತಿ’ ನಿರಂತರವಾಗಿ ಮಾಡುತ್ತಾ ಬಂದಿದೆ. ಕೊರೋನೋತ್ತರ ಕಾಲದಲ್ಲಿ ಸಾಹಿತ್ಯಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಹೊತ್ತಿನಲ್ಲೂ ಪತ್ರಿಕೆ ಸಾಹಿತ್ಯಿಕ ಸಂಗತಿಗಳಿಗೂ ಮಹತ್ವವನ್ನು ನೀಡಿದೆ. ಪತ್ರಿಕೆಯೊಂದು ಪ್ರಕಟಿಸುವ ಅಂಕಣ ಬರಹಗಳು, ಸಂಪಾದಕೀಯ, ಮುಖಪುಟದ ಸುದ್ದಿಗಳು ಎಲ್ಲವೂ ಅದರ ಗುಣಮಟ್ಟವನ್ನು ಸೂಚಿಸುವುದರೊಂದಿಗೆ ವಿಚಾರಧಾರೆಯನ್ನು ಪ್ರತಿಪಾದಿಸುತ್ತದೆ. ಮರೆಯಾಗಿರುವ ಎಷ್ಟೋ ಅನಾಮಿಕರನ್ನು ಗುರುತಿಸಿ, ಬೆಂಬಲಿಸಿ, ಪ್ರೋತ್ಸಾಹಿಸಿ ಬರವಣಿಗೆಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳ್ಳುವಂತೆ ಮಾಡಿದ್ದು, ಲೇಖಕರ ಬೆಳವಣಿಗೆಯಲ್ಲಿ ಮತ್ತು ಪತ್ರಿಕೆಯ ಬೆಳೆವಣಿಗೆಯಲ್ಲಿ ಮಹತ್ವದ ಸಂಗತಿಯಾಗಿದೆ. ಗೆದ್ದ ಎತ್ತಿನ ಬಾಲವನ್ನಷ್ಟೇ ಹಿಡಿಯುವವರ ಮಧ್ಯೆ ಯುವ ಬರಹಗಾರರು, ಯುವ ವರದಿಗಾರರು ಪತ್ರಿಕೆಗೆ ಹೊಸ ನೋಟವನ್ನು, ಕಾಣ್ಕೆಯನ್ನು ನೀಡುತ್ತಾರೆ. ಈ ಎರಡು ಅವಕಾಶಗಳನ್ನು ಪತ್ರಿಕೆ ಸದ್ಬಳಕೆ ಮಾಡಿಕೊಂಡಿದೆ. ಬಹಳ ಮಂದಿ ಲೇಖಕಿಯರು ಇಲ್ಲಿ ಗುರುತಿಸಿಕೊಂಡಿದ್ದಾರೆ. ಚಂದ್ರಕಲಾ ನಂದಾವರ ಅವರ ಅಂಕಣ ‘ನನ್ನೂರು ನನ ಜನ’ ಈ ಹಿನ್ನೆಲೆಯಲ್ಲಿ ಕರಾವಳಿಯ ಸ್ವಾತಂತ್ರ್ಯಪೂರ್ವದೊಂದಿಗೆ ಸ್ವಾತಂತ್ರ್ಯೋತ್ತರ ಕಾಲದ ಭೌತಿಕ ಲೋಕವನ್ನು, ಭಾವನಾತ್ಮಕ ಲೋಕವನ್ನು ಈ ಕಾಲದ ಓದುಗರಿಗೆ ಪರಿಚಯಿಸಿದೆ. ಒಂದು ಕಾಲದಲ್ಲಿ ಕರಾವಳಿಯಲ್ಲಿ ನೆಲೆಸಿದ್ದ ಸೌಹಾರ್ದ ಪರಂಪರೆಯ ಸಾಮಾಜಿಕ ಮೌಲ್ಯವನ್ನು ಲೋಕಕ್ಕೆ ಪರಿಚಯಿಸಿದೆ. ಇಂತಹ ಹಲವಾರು ಉದಾಹರಣೆಗಳನ್ನು ಈ ಹಿನ್ನೆಲೆಯಲ್ಲಿ ನೀಡಬಹುದು.

ಪತ್ರಿಕೆಗಳು ತರುವ ವಾರ್ಷಿಕ ವಿಶೇಷಾಂಕಗಳು ಮತ್ತು ಅವುಗಳ ಗುಣಮಟ್ಟವು ಮಹತ್ವದ್ದು. ವಾರ್ತಾಭಾರತಿ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ವಿಸ್ತೃತತೆಯನ್ನು ಮಾತ್ರ ಹೊಂದದೆ ವೈಚಾರಿಕತೆಯನ್ನು ಮುಖ್ಯ ಮೌಲ್ಯವಾಗಿಸಿ ಇಂತಹ ವಿಶೇಷಾಂಕಗಳನ್ನು ಹೊರತಂದಿದೆ. ಇದು ಪತ್ರಿಕೆಯ ಹೆಚ್ಚುಗಾರಿಕೆಯಾಗಿದೆ. ಸಾಹಿತ್ಯದ ಆಸಕ್ತಿ, ಅಭಿರುಚಿಗಳೊಂದಿಗೆ ಅದನ್ನು ಬೆಳೆಸುವ ಕೆಲಸವನ್ನು ಪತ್ರಿಕೆ ನಡೆಸಿದೆ. ಇದರಿಂದ ಪತ್ರಿಕೆಯ ಗುಣಮಟ್ಟವೂ ಮುಖ್ಯವಾಗುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಮತ್ತು ಇ-ಪತ್ರಿಕೆಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಓದುವುದಕ್ಕಿಂತ ನೋಡಲು, ಕೇಳಲು ಹೆಚ್ಚು ಇಷ್ಟಪಡುವ ಜನರ ಮಧ್ಯೆ ವಾರ್ತಾಭಾರತಿ ಇ-ಪತ್ರಿಕೆಯ ಮೂಲಕ ತನ್ನನ್ನು ರುಜುವಾತು ಪಡಿಸಿಕೊಂಡಿದೆ. ಈ ಸವಾಲನ್ನು ಎದುರಿಸಿ ತನ್ನ ಅಸ್ಮಿತೆಯನ್ನು, ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ಯಶಸ್ಸು ಮಹತ್ವದ್ದು. ತಕ್ಷಣದ ಸುದ್ದಿ ಮತ್ತು ಎಲ್ಲರನ್ನೂ ತಲುಪುವ ಸುದ್ದಿಯೂ ಮಹತ್ವವೆಸುತ್ತದೆ. ಇಂದಿನ ವೇಗದ ಯುಗಕ್ಕೆ ಸ್ಪಂದಿಸಿ ಆ ಮೂಲಕ ತನ್ನ ಸ್ಥಾನವನ್ನು ಪತ್ರಿಕೆಯೊಂದು ಕಾಯ್ದಿರಿಸಿಕೊಳ್ಳುವುದು ಸುಲಭವಲ್ಲ.

ಎಲ್ಲ್ಲ ಸಾಧ್ಯತೆಗಳ ಮಧ್ಯೆಯೂ ಪತ್ರಿಕೆಯ ಮಿತಿ ಎಂದರೆ ಪತ್ರಿಕೆ ಭೌತಿಕವಾಗಿ ಅಚ್ಚುಗೊಳ್ಳುವಾಗ ಪ್ರಾದೇಶಿಕವಾಗಿ ಹಳ್ಳಿಯ ಮೂಲೆ ಮೂಲೆಗಳನ್ನು ತಲುಪದಿರುವುದು. ಪತ್ರಿಕೆಯ ಪಯಣದಲ್ಲಿ ಎಲ್ಲವೂ ಸುಗಮವಾಗಿ ಸಾಗಲಿ. ಕೇವಲ ವ್ಯಾವಹಾರಿಕ ಉದ್ದೇಶ ಮಾತ್ರವಲ್ಲದೆ, ಸಾಮಾಜಿಕ ಹೊಣೆಗಾರಿಕೆಯೂ ಈ ಹಿನ್ನೆಲೆಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಧೈರ್ಯವಾಗಿ ಹೇಳಬಹುದು. ಈ ಕಾರಣಕ್ಕಾಗಿಯೇ ಪತ್ರಿಕೆಯ ಯಶಸ್ಸಿಗೆ ಮತ್ತು ಸಾಧನೆಗೆ ಶುಭವನ್ನು ಹಾರೈಸುತ್ತೇನೆ. ಪತ್ರಿಕೆಯೂ ಇನ್ನಷ್ಟು ಎತ್ತರಕ್ಕೇರಲಿ. ಪತ್ರಿಕಾ ಧರ್ಮ ಬಾಳಿ ಬೆಳಗಲಿ ಎಂಬ ಆಶಯ ಎಲ್ಲರದು ಆಗಿರುತ್ತದೆ ಎಂಬ ಸಹೃದಯ ಹಾರೈಕೆ ನನ್ನದೂ ಕೂಡಾ ಹೌದು.

Tags

Varthabharathi
share
ಡಾ. ಜ್ಯೋತಿ, ಚೇಳಾರು
ಡಾ. ಜ್ಯೋತಿ, ಚೇಳಾರು
Next Story
X