Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ವಾರ್ತಾಭಾರತಿಗೆ 24ರ ಸಂಭ್ರಮ
  4. ʼವಾರ್ತಾಭಾರತಿʼ ಸುದ್ದಿಯಾಚೆಗಿನ ಒಂದು...

ʼವಾರ್ತಾಭಾರತಿʼ ಸುದ್ದಿಯಾಚೆಗಿನ ಒಂದು ಜನಪರ ಧ್ವನಿ: ಮುಹಮ್ಮದ್ ಅಲಿ ಕಮ್ಮರಡಿ

ವಾರ್ತಾಭಾರತಿಗೆ 24ರ ಸಂಭ್ರಮ

ವಾರ್ತಾಭಾರತಿವಾರ್ತಾಭಾರತಿ28 Aug 2026 10:31 PM IST
share
ʼವಾರ್ತಾಭಾರತಿʼ ಸುದ್ದಿಯಾಚೆಗಿನ ಒಂದು ಜನಪರ ಧ್ವನಿ: ಮುಹಮ್ಮದ್ ಅಲಿ ಕಮ್ಮರಡಿ

ಮಂಗಳೂರು: 24ನೇ ವರ್ಷಕ್ಕೆ ಕಾಲಿಡುತ್ತಿರುವ ಕನ್ನಡದ ದೈನಿಕ ‘ವಾರ್ತಾಭಾರತಿ’ಯನ್ನು ಕುರಿತು ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದು ನನಗೆ ಸಂತೋಷದ ಜೊತೆಗೆ ಒಂದು ಜವಾಬ್ದಾರಿಯೂ ಹೌದು.

ಪತ್ರಿಕೆ ಎಂದರೆ ಕೇವಲ ದಿನದ ಸುದ್ದಿಗಳನ್ನು ಮುದ್ರಿಸಿ ಓದುಗರ ಕೈಗೆ ತಲುಪಿಸುವ ಒಂದು ಮಾಧ್ಯಮವಲ್ಲ. ಅದು ಸಮಾಜದ ಕಣ್ಣು, ಕಿವಿ ಮತ್ತು ಕೆಲವೊಮ್ಮೆ ಆತ್ಮಸಾಕ್ಷಿಯೂ ಆಗಿರಬೇಕು. ಅಧಿಕಾರದ ಮುಂದೆ ಪ್ರಶ್ನೆ ಕೇಳುವ ಧೈರ್ಯ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಬದ್ಧತೆ, ಧ್ವನಿಯಿಲ್ಲದವರ ನೋವನ್ನು ಸಮಾಜದ ಮುಂದಿಡುವ ಮಾನವೀಯತೆ ಮತ್ತು ಸತ್ಯವನ್ನು ಯಾವುದೇ ಒತ್ತಡಕ್ಕೂ ಮಣಿಯದೆ ಹೇಳುವ ನಿಷ್ಠೆ—ಇವೆಲ್ಲವೂ ಒಳ್ಳೆಯ ಪತ್ರಿಕೋದ್ಯಮದ ಅಡಿಪಾಯಗಳು. ಈ ಅರ್ಥದಲ್ಲಿ ನೋಡಿದಾಗ ‘ವಾರ್ತಾಭಾರತಿ’ ಕೇವಲ ಒಂದು ಕನ್ನಡ ದೈನಿಕವಲ್ಲ; ಅದು ಒಂದು ಪತ್ರಿಕಾ ಮೌಲ್ಯದ ಪರಂಪರೆಯಾಗಿ ಬೆಳೆದಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

2003ರಲ್ಲಿ ಕರಾವಳಿಯಿಂದ ಆರಂಭವಾದ ಈ ಪತ್ರಿಕೆ, ತನ್ನದೇ ಆದ ವೈಚಾರಿಕ ಸ್ಪಷ್ಟತೆ ಮತ್ತು ಪತ್ರಿಕಾ ಧರ್ಮದ ಬದ್ಧತೆಯಿಂದ ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ. ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ, ಸಂಸ್ಥೆ, ಉದ್ಯಮ ಅಥವಾ ಒತ್ತಡದ ಗುಂಪಿನ ಹಿತಾಸಕ್ತಿಗೆ ಪತ್ರಿಕೆಯನ್ನು ಒಪ್ಪಿಸದೆ, ಜನರ ಪರವಾಗಿ ನಿಲ್ಲುವುದು ತನ್ನ ಮೂಲ ಧ್ಯೇಯವೆಂದು ಅದು ನಿರಂತರವಾಗಿ ತೋರಿಸಿಕೊಟ್ಟಿದೆ.

ಯಾರ ಧ್ವನಿ ಕೇಳಿಸುವುದಿಲ್ಲವೋ, ಅವರ ಧ್ವನಿಯಾಗುವುದು ನಮ್ಮ ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಮಾತನಾಡುವ ಅವಕಾಶವಿಲ್ಲ. ಅಧಿಕಾರದಲ್ಲಿರುವವರ ಮಾತುಗಳಿಗೆ ದೊಡ್ಡ ವೇದಿಕೆಗಳು ಸಿಗುತ್ತವೆ. ಪ್ರಭಾವಿಗಳ ಸುದ್ದಿಗಳು ಸುಲಭವಾಗಿ ಸುದ್ದಿಯಾಗುತ್ತವೆ. ಆದರೆ ಬಡವರು, ಕಾರ್ಮಿಕರು, ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಅಸಂಘಟಿತ ವರ್ಗಗಳು ಮತ್ತು ಸಮಾಜದ ಅಂಚಿನಲ್ಲಿರುವವರ ನೋವುಗಳು ಅನೇಕ ಬಾರಿ ಸುದ್ದಿಯ ಮುಖ್ಯವಾಹಿನಿಯಿಂದ ಹೊರಗುಳಿಯುತ್ತವೆ. ಇಂತಹ ಸಂದರ್ಭದಲ್ಲೇ ವಾರ್ತಾಭಾರತಿಯ ಮಹತ್ವ ಅರಿವಾಗುತ್ತದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾರ್ತಾಭಾರತಿಯನ್ನು ‘ಧ್ವನಿಯಿಲ್ಲದವರ ಧ್ವನಿ’ ಎಂದು ಬಣ್ಣಿಸಿರು ವುದು ಕೇವಲ ಒಂದು ಪ್ರಶಂಸೆಯ ಮಾತಲ್ಲ; ಈ ಪತ್ರಿಕೆಯ ಎರಡು ದಶಕಗಳ ಪತ್ರಿಕಾ ಪಯಣವನ್ನು ಅರ್ಥ ಮಾಡಿಕೊಳ್ಳಲು ಅತ್ಯಂತ ಸೂಕ್ತವಾದ ವ್ಯಾಖ್ಯಾನವೆಂದು ನನಗೆ ಅನಿಸುತ್ತದೆ. ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವುದರ ಜೊತೆಗೆ, ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತಂದು ಸರ್ಕಾರಗಳು ಜನಪರವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಮಾಧ್ಯಮವಾಗಿ ವಾರ್ತಾಭಾರತಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಜಾತಿ-ಧರ್ಮದ ಗಡಿಗಳನ್ನು ಮೀರುವ ಪತ್ರಿಕೆ:-

ವಾರ್ತಾಭಾರತಿಯ ವಿಶೇಷತೆಯೆಂದರೆ ಅದರ ಮಾಲೀಕತ್ವ ಅಥವಾ ಆಡಳಿತದ ಹಿನ್ನೆಲೆಯನ್ನು ಮೀರಿ ಅದರ ಪತ್ರಿಕಾ ನಿಲುವನ್ನು ನೋಡುವುದು. ಜಾತಿ, ಧರ್ಮ, ಭಾಷೆ, ಪ್ರದೇಶ, ಪಕ್ಷ ಮತ್ತು ಸಿದ್ಧಾಂತಗಳ ಭಿನ್ನತೆಯ ನಡುವೆಯೂ ಮಾನವೀಯತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಕೇಂದ್ರದಲ್ಲಿಟ್ಟುಕೊಂಡು ವರದಿ ಮಾಡುವ ಪ್ರಯತ್ನ ಅದರ ವೈಶಿಷ್ಟ್ಯ.

ಖ್ಯಾತ ಚಲನಚಿತ್ರ ನಿರ್ದೇಶಕ ಮಹೇಶ್ ಭಟ್ ಅವರು ವಾರ್ತಾಭಾರತಿಯನ್ನು ಶ್ಲಾಘಿಸುವ ಸಂದರ್ಭದಲ್ಲಿ, ಜಾತ್ಯತೀತತೆಯ ಧ್ವನಿಯನ್ನು ಎತ್ತುವ ಅಗತ್ಯವಿರುವ ಭಾರತದಲ್ಲಿ ವಾರ್ತಾಭಾರತಿ ಮಾಡುತ್ತಿರುವ ಕೆಲಸದ ಮಹತ್ವವನ್ನು ಒತ್ತಿ ಹೇಳಿದ್ದರು. ಇದು ವಾರ್ತಾಭಾರತಿಯ ಬಗ್ಗೆ ಹೊರಗಿನಿಂದ ಬಂದ ಅತ್ಯಂತ ಮಹತ್ವದ ಮನ್ನಣೆಗಳಲ್ಲಿ ಒಂದು.

‘ಕರ್ನಾಟಕದ ಕಾವಲುಗಾರ’ ಎಂಬ ಗೌರವ:-

ಜ್ಞಾನಪೀಠ ಪುರಸ್ಕೃತ, ಕನ್ನಡದ ಮಹಾನ್ ಚಿಂತಕ ಡಾ. ಯು.ಆರ್. ಅನಂತಮೂರ್ತಿ ಅವರು ವಾರ್ತಾಭಾರತಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಪತ್ರಿಕೆಯ ಸಂಪಾದಕೀಯಗಳ ಗುಣಮಟ್ಟವನ್ನು ಅವರು ವಿಶೇಷವಾಗಿ ಮೆಚ್ಚಿಕೊಂಡಿದ್ದರು. ವಾರ್ತಾಭಾರತಿಯ ಸಂಪಾದಕೀಯಗಳು ಕನ್ನಡ ಪತ್ರಿಕೋದ್ಯಮದಲ್ಲಿ ಅತ್ಯುತ್ತಮವಾದವು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು. ಒಂದು ಸಂದರ್ಭದಲ್ಲಿ ಅವರು ವಾರ್ತಾಭಾರತಿಯನ್ನು ‘ಕರ್ನಾಟಕದ ಕಾವಲುಗಾರ’ ಎಂಬ ಅರ್ಥಪೂರ್ಣ ಗೌರವದಿಂದ ಕರೆದಿದ್ದರು ಎಂಬುದು ಈ ಪತ್ರಿಕೆಯ ಸಾಮಾಜಿಕ ಹೊಣೆಗಾರಿಕೆಯನ್ನು ಸೂಚಿಸುವ ಮಾತು. ಇದು ಸಾಮಾನ್ಯ ಪ್ರಶಂಸೆಯಲ್ಲ. ಕನ್ನಡ ಸಾಹಿತ್ಯದ ಅತ್ಯುನ್ನತ ಶಿಖರವನ್ನು ತಲುಪಿದ ಒಬ್ಬ ಚಿಂತಕ, ಒಂದು ಪತ್ರಿಕೆಯ ಸಂಪಾದಕೀಯ ಧ್ವನಿಯಲ್ಲಿ ಕಂಡ ಬೌದ್ಧಿಕ ಪ್ರಾಮಾಣಿಕತೆಗೆ ನೀಡಿದ ಮಾನ್ಯತೆ.

ವಾರ್ತಾಭಾರತಿಯ ಸಂಪಾದಕೀಯಗಳು ಕೇವಲ ಅಭಿಪ್ರಾಯಗಳಾಗದೆ, ಓದುಗರನ್ನು ಯೋಚಿಸುವಂತೆ ಮಾಡುವ, ಪ್ರಶ್ನಿಸುವಂತೆ ಮಾಡುವ ಮತ್ತು ಚರ್ಚೆಗೆ ಪ್ರೇರೇಪಿಸುವ ಬರಹಗಳಾಗಿವೆ. ಆಯ್ದ ಸಂಪಾದಕೀಯಗಳು ಪುಸ್ತಕ ರೂಪದಲ್ಲೂ ಪ್ರಕಟವಾಗಿರುವುದು ಅದರ ಬೌದ್ಧಿಕ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಪತ್ರಿಕಾ ಸ್ವಾತಂತ್ರ್ಯದ ನಿಜವಾದ ಪರೀಕ್ಷೆ:-

ಪತ್ರಿಕೆ ಯಾರನ್ನು ಹೊಗಳುತ್ತದೆ ಎನ್ನುವುದಕ್ಕಿಂತ, ಯಾರನ್ನು ಪ್ರಶ್ನಿಸಲು ಹೆದರುವುದಿಲ್ಲ ಎಂಬುದೇ ಅದರ ನಿಜ ವಾದ ಶಕ್ತಿ. ಆಡಳಿತ ಯಾವುದೇ ಪಕ್ಷದ್ದಾಗಿರಲಿ, ಅಧಿಕಾರದಲ್ಲಿರುವವರು ಯಾರೇ ಆಗಿರಲಿ, ಅವರ ತಪ್ಪುಗಳನ್ನು ಪ್ರಶ್ನಿಸುವ ಧೈರ್ಯವಿದ್ದಾಗ ಮಾತ್ರ ಪತ್ರಿಕಾ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ. ಅದೇ ರೀತಿ ವಿರೋಧ ಪಕ್ಷದಲ್ಲಿ ರುವವರ ತಪ್ಪುಗಳನ್ನೂ ಪ್ರಶ್ನಿಸುವ ನೈತಿಕ ಧೈರ್ಯ ಪತ್ರಿಕೆಗೆ ಇರಬೇಕು. ಪತ್ರಿಕೆಯ ನಿಷ್ಠೆ ವ್ಯಕ್ತಿಗಳಿಗಲ್ಲ; ಸತ್ಯಕ್ಕೆ ಮತ್ತು ಜನರಿಗೆ ಇರಬೇಕು.

ಈ ತತ್ವವನ್ನು ವಾರ್ತಾಭಾರತಿ ತನ್ನ ದೀರ್ಘ ಪಯಣದಲ್ಲಿ ಉಳಿಸಿಕೊಂಡಿರುವುದು ಅದರ ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ. ‘ನಾವು ಯಾರ ಪರ?’ ಎಂಬ ಪ್ರಶ್ನೆಗೆ ಅದರ ಉತ್ತರ ‘ಸತ್ಯದ ಪರ, ಜನರ ಪರ’ ಎಂಬುದಾಗಿದ್ದರೆ, ಅದೇ ನಿಜವಾದ ಪತ್ರಿಕಾ ಧರ್ಮ.

ಇಂದಿನ ಮಾಧ್ಯಮ ಪರಿಸರದಲ್ಲಿ ವಾರ್ತಾಭಾರತಿಯ ಅಗತ್ಯ ಇನ್ನಷ್ಟು ಹೆಚ್ಚಾಗಿದೆ:-

ಇಂದು ಮಾಹಿತಿ ಬಹಳ ವೇಗವಾಗಿ ಹರಡುತ್ತದೆ. ಆದರೆ ವೇಗವಾಗಿ ಹರಡುವ ಪ್ರತಿಯೊಂದು ಮಾಹಿತಿಯೂ ಸತ್ಯ ವಾಗಿರಬೇಕೆಂದಿಲ್ಲ. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಅರ್ಧಸತ್ಯ, ತಪ್ಪು ಮಾಹಿತಿ, ವದಂತಿ ಮತ್ತು ಪೂರ್ವಾ ಗ್ರಹಪೀಡಿತ ನಿರೂಪಣೆಗಳು ಕ್ಷಣಾರ್ಧದಲ್ಲಿ ಸಾವಿರಾರು ಜನರನ್ನು ತಲುಪುತ್ತವೆ. ಇಂತಹ ಸಂದರ್ಭದಲ್ಲಿ ‘ಮೊದಲು ಸುದ್ದಿ, ನಂತರ ಸತ್ಯ’ ಎನ್ನುವ ಧೋರಣೆಯ ಬದಲು ‘ಮೊದಲು ಸತ್ಯ, ನಂತರ ಸುದ್ದಿ’ ಎನ್ನುವ ಪತ್ರಿಕಾ ಸಂಸ್ಕೃತಿ ಅತ್ಯಗತ್ಯ.

ವಾರ್ತಾಭಾರತಿ ತನ್ನ ಅಧಿಕೃತ ಧ್ಯೇಯದಲ್ಲಿಯೇ ಸತ್ಯವನ್ನು ತಲುಪಿಸುವುದು, ಮಿಥ್ಯೆಗಳನ್ನು ಬಯಲಿಗೆಳೆಯು ವುದು ಮತ್ತು ಸಾರ್ವತ್ರಿಕ ಶಾಂತಿ ಹಾಗೂ ಕಲ್ಯಾಣವನ್ನು ಉತ್ತೇಜಿಸುವುದಕ್ಕೆ ಒತ್ತು ನೀಡಿದೆ. ಇದು ಇಂದಿನ ಕಾಲಕ್ಕೆ ಅತ್ಯಂತ ಅಗತ್ಯವಾದ ಪತ್ರಿಕಾ ಮೌಲ್ಯ.

ಇತ್ತೀಚೆಗೆ ವಾರ್ತಾಭಾರತಿಯ ಸಂಪಾದಕೀಯಗಳ ಸಂಕಲನ ಬಿಡುಗಡೆ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್ ಅವರು, ವಾರ್ತಾಭಾರತಿಯ ಸಂಪಾದಕೀಯಗಳನ್ನು ಓದುವುದು ಒಂದು ವಿಶಿಷ್ಟ ಅನುಭವವಾಗಿದ್ದು, ಪತ್ರಿಕೆ ನಿರ್ಭೀತ ಮತ್ತು ಪ್ರಾಮಾಣಿಕ ಪತ್ರಿಕೋದ್ಯಮದ ಮೂಲಕ ಕರ್ನಾಟಕದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಸಂದರ್ಭದಲ್ಲಿ ಅವರು ಮಾಧ್ಯಮ, ಕಲಾವಿದರು ಮತ್ತು ಜನರು ನಿರಂತರವಾದ ವಿರೋಧಪಕ್ಷದ ಪಾತ್ರವನ್ನು ವಹಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಈ ಮಾತುಗಳು ಪತ್ರಿಕೆಯ ನಿಜವಾದ ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುತ್ತವೆ.

ಪತ್ರಿಕೆಯ ಯಶಸ್ಸನ್ನು ಕೇವಲ ಪ್ರಸರಣ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಒಬ್ಬ ಬಡ ವ್ಯಕ್ತಿಯ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಬರುವಂತೆ ಮಾಡಿದರೆ, ಒಬ್ಬ ಅನ್ಯಾಯಕ್ಕೊಳಗಾದವನಿಗೆ ನ್ಯಾಯದ ಬಾಗಿಲು ತೆರೆಯಲು ನೆರವಾದರೆ, ಒಂದು ತಪ್ಪು ನೀತಿಯ ಬಗ್ಗೆ ಸಮಾಜದಲ್ಲಿ ಚರ್ಚೆ ಹುಟ್ಟಿಸಿದರೆ, ಒಂದು ಸುಳ್ಳನ್ನು ಬಯಲಿಗೆಳೆದರೆ, ಒಬ್ಬ ಸಾಮಾನ್ಯ ನಾಗರಿಕನ ಪ್ರಶ್ನೆಯನ್ನು ಅಧಿಕಾರದ ಕೇಂದ್ರಕ್ಕೆ ತಲುಪಿಸಿದರೆ ಅದೇ ಪತ್ರಿಕೆಯ ನಿಜವಾದ ಯಶಸ್ಸು. ಈ ದೃಷ್ಟಿಯಿಂದ ನೋಡಿದಾಗ ವಾರ್ತಾಭಾರತಿಯ ಸಾಧನೆ ಗಮನಾರ್ಹ.

ಕರ್ನಾಟಕದ ವಿವಿಧ ಭಾಗಗಳ ಜನರ ಬದುಕು, ಸಮಸ್ಯೆ, ಆಶೋತ್ತರಗಳಿಗೆ ಅದು ನೀಡುತ್ತಿರುವ ಪ್ರಾಮುಖ್ಯತೆ ಅದರ ಜನಪರ ಸ್ವಭಾವವನ್ನು ತೋರಿಸುತ್ತದೆ. ಮುದ್ರಣ ಮಾಧ್ಯಮದ ಜೊತೆಗೆ ಡಿಜಿಟಲ್ ಮಾಧ್ಯಮ, ವೆಬ್ ಪೋರ್ಟಲ್, ಸಾಮಾಜಿಕ ಮಾಧ್ಯಮ ಮತ್ತು ವೀಡಿಯೊ ವೇದಿಕೆಗಳಲ್ಲಿಯೂ ಅದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ವಾರ್ತಾಭಾರತಿ ಒಂದು ಪತ್ರಿಕೆ ಮಾತ್ರವಲ್ಲ, ಒಂದು ನಂಬಿಕೆ:-

ಇಪ್ಪತ್ತನಾಲ್ಕು ವರ್ಷಗಳ ಪಯಣದ ನಂತರವೂ ಒಂದು ಪತ್ರಿಕೆಯ ಮೇಲೆ ಓದುಗರಿಗೆ ನಂಬಿಕೆ ಉಳಿದಿರುವುದೇ ಅದರ ದೊಡ್ಡ ಬಂಡವಾಳ. ಜಾಹೀರಾತುದಾರರು ಬದಲಾಗಬಹುದು. ರಾಜಕೀಯ ಪಕ್ಷಗಳು ಬದಲಾಗಬಹುದು. ಸರ್ಕಾರಗಳು ಬದಲಾಗಬಹುದು. ತಂತ್ರಜ್ಞಾನ ಬದಲಾಗಬಹುದು. ಪತ್ರಿಕೆಗಳ ರೂಪವೂ ಬದಲಾಗಬಹುದು. ಆದರೆ ಸತ್ಯದ ಮೇಲಿನ ನಂಬಿಕೆ, ಪತ್ರಿಕಾ ಧರ್ಮದ ಮೇಲಿನ ಬದ್ಧತೆ ಮತ್ತು ಜನರ ಮೇಲಿನ ಕಾಳಜಿ ಮಾತ್ರ ಬದಲಾಗಬಾರದು.

ವಾರ್ತಾಭಾರತಿ ಈ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂಬುದು ನನ್ನ ಹಾರೈಕೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ; ಆದರೆ ಬೆಳವಣಿಗೆಯೊಂದಿಗೆ ತನ್ನ ಮೂಲ ಸ್ವರೂಪವನ್ನು ಕಳೆದು ಕೊಳ್ಳದಿರಲಿ. ದೊಡ್ಡದಾಗುವುದಕ್ಕಿಂತ ವಿಶ್ವಾಸಾರ್ಹವಾಗಿರುವುದು ಮುಖ್ಯ. ಹೆಚ್ಚು ಜನರನ್ನು ತಲುಪುವುದಕ್ಕಿಂತ ತಲುಪಿದ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮುಖ್ಯ.

ನನ್ನ ದೃಷ್ಟಿಯಲ್ಲಿ ವಾರ್ತಾಭಾರತಿಯ ದೊಡ್ಡ ಶಕ್ತಿ ಅದರ ಮುದ್ರಣ ಯಂತ್ರಗಳಲ್ಲ, ಅದರ ಕಟ್ಟಡದಲ್ಲಲ್ಲ, ಅದರ ತಂತ್ರಜ್ಞಾನದಲ್ಲಲ್ಲ ಅದರ ಪತ್ರಿಕಾ ಆತ್ಮಸಾಕ್ಷಿಯಲ್ಲಿದೆ. ಆ ಆತ್ಮಸಾಕ್ಷಿ ಸದಾ ಜಾಗೃತವಾಗಿರಲಿ. ಸತ್ಯದ ಪರವಾಗಿ ಅದರ ಧ್ವನಿ ಇನ್ನಷ್ಟು ಗಟ್ಟಿಯಾಗಲಿ. ಧ್ವನಿಯಿಲ್ಲದವರ ಧ್ವನಿಯಾಗಿ ಅದರ ಪಯಣ ಇನ್ನಷ್ಟು ದೂರ ಸಾಗಲಿ. ಜಾತಿ-ಧರ್ಮ-ಪಕ್ಷಗಳ ಗಡಿಗಳನ್ನು ಮೀರಿ ಮಾನವೀಯತೆಯ ಪರವಾಗಿ ಅದರ ನಿಲುವು ಇನ್ನಷ್ಟು ಬಲಗೊಳ್ಳಲಿ.

ಕನ್ನಡ ಪತ್ರಿಕೋದ್ಯಮದ ಘನ ಪರಂಪರೆಯಲ್ಲಿ ವಾರ್ತಾಭಾರತಿ ತನ್ನದೇ ಆದ ವಿಶಿಷ್ಟ ಅಧ್ಯಾಯಗಳನ್ನು ಇನ್ನೂ ಹಲವು ದಶಕಗಳ ಕಾಲ ಬರೆಯಲಿ. ವಾರ್ತಾಭಾರತಿಗೆ 24ನೇ ವರ್ಷದ ಹಾರ್ದಿಕ ಶುಭಾಶಯಗಳು. ಸತ್ಯವನ್ನು ಹುಡುಕುವ ಪತ್ರಿಕೆಗೆ, ಸತ್ಯವನ್ನು ಹೇಳುವ ಧೈರ್ಯ ಎಂದಿಗೂ ಕಡಿಮೆಯಾಗದಿರಲಿ.

-ಮುಹಮ್ಮದ್ ಅಲಿ ಕಮ್ಮರಡಿ

Tags

'Varthabharatipro-peoplevoicenewsMuhammad Ali Kammaradi
share
ವಾರ್ತಾಭಾರತಿ
ವಾರ್ತಾಭಾರತಿ
Next Story
X