ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಅಲಿ ಆಯ್ಕೆ

ಬಂಟ್ವಾಳ: ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಶಿಕ್ಷಣದ ಸಬಲೀಕರಣಕ್ಕಾಗಿ ಕೆಲಸ ಮಾಡಿದ ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಥೆಯ ಬಂಟ್ವಾಳ ಘಟಕವು ಶಿಕ್ಷಣದ ಜೊತೆಗೆ ವಿವಿಧ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಸಂಸ್ಥೆಯ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದು ಜಮೀಯ್ಯತುಲ್ ಫಲಾಹ್ ಕೇಂದ್ರೀಯ ಘಟಕದ ಕೋಶಾಧಿಕಾರಿ ನ್ಯಾಯವಾದಿ ಕೆ.ಎಂ. ಸಿದ್ದೀಕ್ ಪುತ್ತೂರು ಹೇಳಿದ್ದಾರೆ.
ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ನಡೆದ "ಮೆಲುಕು - 2022-25' ಹಾಗೂ 2025-26ನೇ ಸಾಲಿನ ಮಹಾಸಭೆಯ ವೀಕ್ಷಕರಾಗಿ ಭಾಗವಹಿಸಿ ಸಂಸ್ಥೆಯ 37 ವರ್ಷಗಳ ಇತಿಹಾಸವನ್ನೊಳಗೊಂಡ 'ಚೈತನ್ಯ' ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವೀಕ್ಷಕರಾದ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಬಪ್ಪಳಿಗೆ, ಜಿಲ್ಲಾ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್ ವೇದಿಕೆಯಲ್ಲಿದ್ದರು.
ಅಧ್ಯಕ್ಷತೆ ವಹಿಸಿದ್ದ ಘಟಕದ ನಿರ್ಗಮನ ಅಧ್ಯಕ್ಷ ರಶೀದ್ ವಿಟ್ಲ ಸಹಕರಿಸಿದ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ಲೆಕ್ಕಪತ್ರ ಮಂಡಿಸಿದರು.
ಈ ವೇಳೆ 2025-27ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು, ಕಾರ್ಯದರ್ಶಿಯಾಗಿ ಹಕೀಮ್ ಕಲಾಯಿ, ಕೋಶಾಧಿಕಾರಿಯಾಗಿ ರಶೀದ್ ವಿಟ್ಲ, ಉಪಾಧ್ಯಕ್ಷರಾಗಿ ಆಸಿಫ್ ಇಕ್ಬಾಲ್ ಕುಂಪನಮಜಲು, ಬಿ.ಎಂ.ತುಂಬೆ, ಜೊತೆ ಕಾರ್ಯದರ್ಶಿಯಾಗಿ ಕೆ.ಎಸ್. ಮುಹಮ್ಮದ್ ಗಡಿಯಾರ, ಸಂಘಟನಾ ಕಾರ್ಯದರ್ಶಿ ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಪತ್ರಿಕಾ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎಂ.ಎಚ್. ಇಕ್ಬಾಲ್ ಮೆಲ್ಕಾರ್, ಎಫ್.ಎಂ. ಬಶೀರ್ ಫರಂಗಿಪೇಟೆ, ಕೆ.ಕೆ.ಶಾಹುಲ್ ಹಮೀದ್, ರಫೀಕ್ ಹಾಜಿ ಆಲಡ್ಕ, ಲತೀಫ್ ನೇರಳಕಟ್ಟೆ, ನೋಟರಿ ಅಬೂಬಕರ್ ವಿಟ್ಲ, ಅಬ್ದುಲ್ ರಝಾಕ್ ಅನಂತಾಡಿ, ಮುಹಮ್ಮದ್ ನಾರಂಕೋಡಿ, ಪಿ.ಮುಹಮ್ಮದ್ ಪಾಣೆಮಂಗಳೂರು, ಹಂಝ ಬಸ್ತಿಕೋಡಿ, ವಿ.ಎಚ್.ಅಶ್ರಫ್ ವಿಟ್ಲ, ಸಾಗರ್ ಮಹಮ್ಮದ್ ಪರ್ಲಿಯ ಆಯ್ಕೆಯಾದರು.
ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ಸ್ವಾಗತಿಸಿದರು. ಅಬೂಬಕರ್ ನೋಟರಿ ಕಿರಾಅತ್ ಪಠಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.







