ಬಿ-ಹ್ಯೂಮನ್ ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು, ಆ.10: ಬಿ-ಹ್ಯೂಮನ್ (ರಿ) ಸಂಸ್ಥೆಯ 10ನೇ ವಾರ್ಷಿಕೋತ್ಸವದ ಮತ್ತು 79ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ರಕ್ತದಾನ ಶಿಬಿರವು ನಗರದ ಪುರಭವನದಲ್ಲಿ ಆರು ಆಸ್ಪತ್ರೆಗಳ ಸಹಯೋಗದಲ್ಲಿ ಶನಿವಾರ ನಡೆಯಿತು.
ಬಿ ಹ್ಯೂಮನ್ ಸಂಸ್ಥೆಯ ಅಧ್ಯಕ್ಷ ಶರೀಫ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತಿತರರು ಮಾತನಾಡಿದರು.
ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ.ಯು.ಟಿ. ಇಫ್ತಿಕರ್ ಅಲಿ ಮತ್ತು ಸುಹೈಲ್ ಕಂದಕ್ ಅವರನ್ನು ಸನ್ಮಾನಿಸಲಾಯಿತು. 733 ಮಂದಿ ರಕ್ತದಾನಗೈದರು. ಲಕ್ಕಿ ಡ್ರಾದ ಮೂಲಕ ಮೂವರು ದಾನಿಗಳಿಗೆ ಮೂರು ಮೊಬೈಲ್ ವಿತರಿಸಲಾಯಿತು.
ಉದ್ಯಮಿಗಳಾದ ಝಕರಿಯ ಜೋಕಟ್ಟೆ, ಶೇಕ್ ಕರ್ನಿರೆ, ಮುಸ್ತಫಾ ಎಸ್.ಎಂ., ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಸೀಫ್ ಡೀಲ್ಸ್, ಟ್ರಸ್ಟಿಗಳಾದ ಇಮ್ರಾನ್ ಹಸನ್, ಶಾಹುಲ್ ಹಮೀದ್ ಉಜಿರೆ, ಗೌರವ ಸಲಹೆಗಾರರಾದ ಅಬ್ಬಾಸ್ ಉಚ್ಚಿಲ್, ಇಮ್ತಿಯಾಝ ಜಿ. ಅಹ್ಮದ್ ಎರ್ಮಾಳ್ ಸಿರಾಜ್ ಹಾಗೂ ಎಸ್‌ಎಂಆರ್ ರಶೀದ್ ಹಾಜಿ, ಸುಲ್ತಾನ್ ಗೋಲ್ಡ್‌ನ ಮಾಲಕ ಅಬ್ದುಲ್ ರವೂಫ್, ಚಂದ್ರಶೇಖರ ಭಂಡಾರಿ, ಹಿದಾಯ ಫೌಂಡೇಶನ್‌ನ ಆಝಾದ್ ಮನ್ಸೂರ್, ಮಾಜಿ ಮೇಯರ್ ಕೆ.ಅಶ್ರಫ್, ಹನೀಫ್ ಹಾಜಿ ಬಂದರ್, ಶಬೀರ್ ಕೃಷ್ಣಾಪುರ, ಝಹೀರ್ ಝಕರಿಯ, ನ್ಯಾಯವಾದಿ ಮುಝಫರ್, ಹನೀಫ್ ಖಾನ್ ಕೊಡಾಜೆ, ರಿಯಾಝ್ ಬಾವ, ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ, ಕೆ.ಎ.ಬಾವ, ಬಿ-ಹ್ಯೂಮನ್ ಮೂಡುಬಿದಿರೆ ಘಟಕದ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ, ಸಿ.ಆರ್. ಅಬೂಬಕ್ಕರ್, ಇಸ್ಮಾಯಿಲ್ ಹಾರೂನ್, ಆಸೀಫ್ ಹೋಂಪ್ಲಸ್, ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಸುಹೈಲ್ ಕಂದಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಸದಸ್ಯ ಬಾತೀಶ್ ಕಾರ್ಯಕ್ರಮ ನಿರೂಪಿಸಿದರು.







