ಕಸಬಾ ಬೆಂಗ್ರೆ : ಸಿಪಿಎಂ ಸಮಾವೇಶ

ಮಂಗಳೂರು, ಆ.10: ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ, ಬೆಲೆ ಏರಿಕೆ, ನಿರುದ್ಯೋಗ-ರೈತರ ಭೂಸ್ವಾಧೀನ ನೀತಿಯ ವಿರುದ್ಧ ಸಿಪಿಎಂ ದ.ಕ. ಜಿಲ್ಲಾದ್ಯಂತ ಹಮ್ಮಿಕೊಂಡಿರುವ ರಾಜಕೀಯ ಪ್ರಚಾರಾಂದೋಲನದ ಭಾಗವಾಗಿ ಕಸಬಾ ಬೆಂಗ್ರೆಯಲ್ಲಿ ರಾಜಕೀಯ ಸಮಾವೇಶ ನಡೆಯಿತು.
ಸಿಪಿಎಂ ಬೆಂಗ್ರೆ ಪ್ರದೇಶ ಮುಖಂಡ ನೌಶಾದ್ ಬೆಂಗ್ರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸಿಪಿಎಂ ಜಿಲ್ಲಾ ಮುಖಂಡ ಬಿ.ಕೆ. ಇಮ್ತಿಯಾಝ್ ಮಾತನಾಡಿದರು.
ತೈಯೂಬ್ ಬೆಂಗ್ರೆ ಸ್ವಾಗತಿಸಿದರು. ವೇದಿಕೆಯಲ್ಲಿ ಸಿಪಿಎಂ ಮುಖಂಡರಾದ ರಫೀಕ್ ಪಿ.ಜಿ., ಬಿಲಾಲ್ ಬೆಂಗ್ರೆ ಉಪಸ್ಥಿತರಿದ್ದರು.
Next Story





