ಕ್ರೀಡಾಕೂಟದಲ್ಲಿ ಸ್ವಪ್ನಾಗೆ ಚಿನ್ನದ ಪದಕ

ಮಂಗಳೂರು, ಆ.10: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಸ್ಮಿತ ಖೇಲೋ ಇಂಡಿಯಾ ಕ್ರೀಡಾಕೂಟದ ಕೆಡೆಟ್ ಮಹಿಳಾ ಅಂಡರ್-33 ಕೆಜಿ ಟೆಕ್ವಾಂಡೋ ವಿಭಾಗದಲ್ಲಿ ಬೈಕಂಪಾಡಿ ಬೆಟ್ರಂಡ್ ರೆಸೆಲ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ವಪ್ನಾರಿಗೆ ಚಿನ್ನದ ಪದಕ ಗಳಿಸಿದ್ದಾರೆ.
ಆ ಮೂಲಕ ಸ್ವಪ್ನಾ ಖೇಲೋ ಇಂಡಿಯಾ ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ. ಈಕೆ ಸುರತ್ಕಲ್ ಸಮೀಪದ ಕುಳಾಯಿ ನಿವಾಸಿ ಮದ್ದಣ್ಣ-ಮಮತಾ ದಂಪತಿಯ ಪುತ್ರಿ.
ದ.ಕ. ಟೆಕ್ವಾಂಡೋ ಮುಖ್ಯ ತರಬೇತುದಾರ ಹಾಗೂ ಜಿಲ್ಲಾ ಟ್ವೆಕಾಂಡೋ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹಾಯಕ ತರಬೇತುದಾರ ಮೇಹುಲ್ ಬಂಗೇರಾ ಅವರ ಮಾರ್ಗದರ್ಶನದಲ್ಲಿ ಸ್ವಪ್ನಾ ಈ ಸಾಧನೆ ಮಾಡಿದ್ದಾರೆ.
Next Story





