ಮಂಗಳೂರು: ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಮಂಗಳೂರು, ಆ.10:ನಗರದ ಮಲ್ಲಿಕಟ್ಟೆಯ ಇಂದಿರಾ ಗಾಂಧಿ ಜನ್ಮ ಶತಾಬ್ದಿ ಭವನದಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಹಾಗೂ ಮಂಗಳೂರು ನಗರ ಬ್ಲಾಕ್ ಮತ್ತು ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಶನಿವಾರ ನಡೆಯಿತು.
ಮಾಜಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವಾ ಧ್ವಜಾರೋಹಣಗೈದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುನೀತ್ ಡೆಸ್ಸ, ಮಂಗಳೂರು ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಆಸಿಫ್ ಬಜಾಲ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವೆಲ್ವಿನ್ ಜೇಸನ್ ಕ್ಯಾಸ್ಟಲೀನೋ, ಪದಾಧಿಕಾರಿಗಳಾದ ಶ್ರುತಿ ಪ್ರವೀಣ್, ಮೆಲ್ಕಾಂ, ಕ್ಲೈಡ್ ಡಿಸೋಜ, ಶಾನ್ ಡಿಸೋಜ, ಕ್ರಿಸ್ಟನ್ ಮಿನೇಜಸ್, ಅವ್ಲೊನ್ ಕ್ಯಾಸ್ಟಲೀನೋ, ಟಿ.ಸಿ. ಗಣೇಶ್, ಗೀತಾ ಪ್ರವೀಣ್, ಸುರೇಶ್, ಶೇಖರ್ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಬ್ಲಾಕ್ ಅಧ್ಯಕ್ಷ ಪೃಥ್ವಿರಾಜ ಪೂಜಾರಿ ಸ್ವಾಗತಿಸಿದರು. ನಗರ ಬ್ಲಾಕ್ ಉಪಾಧ್ಯಕ್ಷ ಸಮರ್ಥ ಭಟ್ ವಂದಿಸಿದರು.





