ಮುಡಿಪು: ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ

ಕೊಣಾಜೆ: ಎಸ್ಕೆಎಸ್ಸೆಸೆಫ್ ಮುಡಿಪು ಕ್ಲಸ್ಟರ್ ಇದರ ಆಶ್ರಯದಲ್ಲಿ ಎಸ್ಕೆಎಸ್ಸೆಸೆಫ್ ವಿಖಾಯ ರಕ್ತದಾನಿ ಬಳಗ ದ.ಕ ಜಿಲ್ಲೆ ಹಾಗೂ ಕಣಚೂರು ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಸಮಸ್ತ 100 ನೇ ವಾರ್ಷಿಕ ಪ್ರಚಾರ ಹಾಗೂ ಮರ್ಹೂಂ ಅಬ್ದುಲ್ ರಹಿಮಾನ್ ಕೊಳತ್ತಮಜಲು ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವು ರವಿವಾರ ಮುಡಿಪುವಿನಲ್ಲಿ ನಡೆಯಿತು.
ಎಸ್ಕೆಎಸ್ಸೆಸೆಫ್ ಮುಡಿಪು ಕ್ಲಸ್ಟರ್ ಸಮಿತಿ ಅಧ್ಯಕ್ಷರಾದ ಅಲೀ ಫೈಝಿ ಪರಪ್ಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಲಸ್ಟರ್ ಸಮಿತಿ ಕೋಶಾಧಿಕಾರಿ ಸಲೀಂ ಬಾವ ಅರ್ಕಾನ ಅವರು ಸಮಾರಂಭದ ಅಧ್ಯಕ್ಣತೆಯನ್ನು ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಡುಪದವು ಜುಮಾ ಮಸೀದಿ ಅಧ್ಯಕ್ಷರು ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ನಾಸಿರ್ ನಡುಪದವು ಅವರು ಭಾಗವಹಿಸಿ ರಕ್ತದಾನದ ಮತ್ತೊಬ್ಬರ ಅಮೂಲ್ಯ ಜೀವವನ್ನು ಉಳಿಸುವ ಕೆಲಸ ಮಾಡಬಹುದು. ಈ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕಿದೆ ಎಂದರು.
ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ತಾಂತ್ರಿಕ ವ್ಯವಸ್ಥಾಪಕ ವೆಂಕಟೇಶ್ ಅವರು ರಕ್ತದಾನದ ಮಹತ್ವದ ಕುರಿತು ಮಾತನಾಡಿದರು. ಎಸ್ಕೆಎಸ್ಸೆಸೆಫ್ ವಿಖಾಯ ದ.ಕ ಜಿಲ್ಲಾ ಸಮಿತಿ ಹಾಗೂ ದೇರಳಕಟ್ಟೆ ವಲಯ ವಿಖಾಯ ಉಸ್ತುವಾರಿ ಸಮೀರ್ ಹೆಚ್.ಕಲ್ಲು ಅವರು ವಿಖಾಯ ಹಾಗೂ ಅದರ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು.
ಸಮಿತಿ ಉಪಾಧ್ಯಕ್ಷರಾದ ಫಾರೂಕ್ ದಾರಿಮಿ ಪಜೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಲಯ ಉಸ್ತುವಾರಿ ಶರೀಫ್ ನಡುಪದವು, ಇರ್ಫಾನ್ ಮಲಾರ್, ಶಫೀಕ್ ಫೀಕ್ ಹೆಚ್.ಕಲ್ಲು, ಸಂಯೋಜಕ ಹನೀಫ್ ಮಲಾರ್, ಮುಡಿಪು ಕ್ಲಸ್ಟರ್ ನ ಅಶ್ರಫ್ ಹೆಚ್.ಕಲ್ಲು, ವಲಯ ಸಮಿತಿ ಅಧ್ಯಕ್ಷರಾದ ಹನೀಫ್ ದಾರಿಮಿ ಪಜೀರ್, ಲತೀಫ್ ಪಜೀರ್,ಬಾಳೆಪುಣಿ ಪಂಚಾಯತ್ ಉಪಾಧ್ಯಕ್ಷರಾದ ಸಿ.ಎಂ.ಶರೀಫ್ ಪಟ್ಟೋರಿ, ಮುಡಿಪು ಕ್ಲಸ್ಟರ್ ನ ರಫೀಕ್ ಪರಪ್ಪು, ಕ್ಲಸ್ಟರ್ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಅರ್ಕಾಣ, ಕೆಂಪು ಕಲ್ಲು ಮಾಲಕರ ಸಂಘದ ಕಾರ್ಯದರ್ಶಿ ಕಮರುದ್ದೀನ್ ಮೂಳೂರು, ಕ್ಲಸ್ಟರ್ ಹಾಗೂ ಶಾಖಾ ಸಮಿತಿ ನೇತಾರರು ಉಪಸ್ಥಿತರಿದ್ದರು.







