ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ ಅಧ್ಯಕ್ಷರಾಗಿ ಸಾಲಿಹ್ ಕೋಯ ಆಯ್ಕೆ

ಮಂಗಳೂರು: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ 2025-27ನೇ ಸಾಲಿನ ಅಧ್ಯಕ್ಷರಾಗಿ ಸಾಲಿ ಕೋಯ ಆಯ್ಕೆಯಾಗಿದ್ದಾರೆ.
ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಶೀದ್ ಎಮ್.ಎ.ಎಸ್. ಮತ್ತು ಬದ್ರುದ್ದೀನ್ ಪಣಂಬೂರು, ಕಾರ್ಯದರ್ಶಿಯಾಗಿ ಹನೀಫ್ ಮಾಸ್ಟರ್, ಕೋಶಾಧಿಕಾರಿಯಾಗಿ ಸಯ್ಯದ್ ಅಶ್ಪಾಕ್ ಅಹ್ಮದ್, ಜತೆ ಕಾರ್ಯದರ್ಶಿ ಫಯಾಝ್ ಜಿ.ಎ., ಸಂಘಟನಾ ಕಾರ್ಯದರ್ಶಿ ಹನೀಫ್ ಬೋಳಾರ, ಪತ್ರಿಕಾ ಕಾರ್ಯದರ್ಶಿ ಎಮ್.ಎಸ್. ಸೈಫುಲ್ಲಾ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಎಸ್. ಮುಹಮ್ಮದ್ ಬಶೀರ್, ನಝೀರ್ ಅಹ್ಮದ್, ಅಬ್ದುಲ್ ಅಝೀಝ್, ಇಸ್ಮಾಲಿಯಬ್ಬ, ಹಸನ್ ಮುಸ್ತಾಕ್, ಇಮ್ತಿಯಾಝ್ ಕೆ, ಇಬ್ರಾಹೀಂ ಎಸ್.ಎಮ್, ಅಬ್ದುಲ್ ಖಾದರ್, ಹಾಮದ್ ಬಾವ, ಆಸಿಫ್ ಮನ್ಸೂರ್, ಇಮ್ರಾನ್, ಅಲ್ತಾಫ್ ಖತೀಬ್, ಇಸ್ಮಾಯಿಲ್ ಡಿಲಕ್ಸ್ ಆಯ್ಕೆಗೊಂಡರು.
ಬಿ.ಎಸ್. ಮುಹಮ್ಮದ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಮ್.ಎಸ್. ಸೈಫುಲ್ಲಾ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಇಮ್ತಿಯಾಝ್ ಖತೀಬ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಜಿಲ್ಲಾ ಸಮಿತಿಯ ವೀಕ್ಷಕರಾಗಿ ಅಬ್ದುನ್ನಾಸಿರ್ ಕೆ.ಕೆ. ಆಗಮಿಸಿದ್ದರು. ನಝೀರ್ ಅಹ್ಮದ್ ವಂದಿಸಿದರು.







