ಪ್ರಯಾಣಿಕರ ತಂಗುದಾಣ, ಆಟೋ ರಿಕ್ಷಾ ನಿಲ್ದಾಣಗಳ ಉದ್ಘಾಟನೆ

ಮಂಗಳೂರು, ಆ.11: ಮಂಗಳೂರು ನಗರದ ಸಾರ್ವಜನಿಕರ ಬೇಡಿಕೆಯಂತೆ ರೋಶಿನಿ ನಿಲಯ, ವೆಲೆನ್ಸಿಯ ಸರ್ಕಲ್, ಜೇರೋಜಾ ಶಾಲೆ, ಡಬಲ್ ಗೇಟ್ ಬಳಿ ನಿರ್ಮಿಸಲಾದ ಬಸ್ ಪ್ರಯಾಣಿಕರ ತಂಗುದಾಣ ಮತ್ತು ನಾಲ್ಕು ಆಟೋರಿಕ್ಷಾ ನಿಲ್ದಾಣಗಳ ಉದ್ಘಾಟನೆಯನ್ನು ವಿಧಾನಪರಿಷತ್ ಶಾಸಕ ಐವನ್ ಡಿ ಸೋಜ ನೆರವೇರಿಸಿದರು.
ಒಂದು ವರ್ಷದಲ್ಲಿ ಸುಮಾರು ಹದಿಮೂರು ರಿಕ್ಷಾ ನಿಲ್ದಾಣಗಳನ್ನು 18 ಬಸ್ ಪ್ರಯಾಣಿಕರ ತಂಗುದಾಣಗಳನ್ನು ವಿಧಾನ ಪರಿಷತ್ತಿನ ಶಾಸಕರ ಅನುದಾನದಲ್ಲಿ ಐವನ್ ಡಿ ಸೋಜ ಅವರು ರಿಕ್ಷಾ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜಪ್ಪು ಸೆಮಿನೆರಿಯ ಫಾ. ಮ್ಯಾಕ್ಸಿಮ್ ರೋಜಾರಿಯೋ ಮಾತನಾಡಿ ವಿಧಾನಪರಿಷತ್ತಿನ ಶಾಸಕ ಐವನ್ ಡಿ ಸೋಜ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಹೋಲಿ ರೊಜಾರಿಯೋ ಕಾನ್ವೆಂಟಿನ ಸಿಸ್ಟರ್ ಸೋಫಿಯಾ, ಮಾಜಿ ಮೇಯರ್ ಜೆಸಿಂತಾವಿಜಯ ಆಲ್ಫ್ರೆಡ್, ಮಾಜಿ ಕಾರ್ಪೊರೇಟರ್ ಅಪ್ಪಿ, ಫಾದರ್ ಜೆಬಿ ಕ್ರಾಸ್ತಾ ಭಗಿನೀಯರಾದ ಜನಿತ , ಮಾರ್ಷಲಿನ್, ಸುಮನ ಜೆರಾಲ್ಡಾ , ಸೋಫಿಯಾ ಡಾ.ಕವಿತಾ ಐವನ್ ಡಿ ಸೋಜ, ಕಾಂಗ್ರೆಸ್ ನಾಯಕರಾದ ಸಲೀಂ, ನಾಗೇಂದ್ರ ಕುಮಾರ, ಭಾಸ್ಕರ್ ರಾವ್, ಸತೀಶ್ ಪೆಂಗಲ್, ನೀತು ಡಿ ಸೋಜ, ಅಲಿಸ್ಟನ್ ಡಿ ಕುನ್ಹಾ, ಜೇಮ್ಸ್ ಪ್ರವೀಣ್, ಕ್ಲೈವ್ ವೆಲೆನ್ಸಿಯಾ, ಸಿರಾಜ್ ಬಜ್ಪೆ, ಅನಿಲ್ ಲೋಬೊ, ವಸಂತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.







