ಹದಗೆಟ್ಟ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸದೇ ಇದ್ದಲ್ಲಿ ಸರಣಿ ಹೋರಾಟ: ಬಿ.ಕೆ ಇಮ್ತಿಯಾಝ್

ಉಳ್ಳಾಲ: ಹದಗೆಟ್ಟ ತೊಕ್ಕೊಟ್ಟು ಕುತ್ತಾರ್ ರಸ್ತೆಯ ದುರಸ್ತಿಗಾಗಿ ಆಗ್ರಹಿಸಿ ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ನೇತೃತ್ವದಲ್ಲಿ ಬಬ್ಬುಕಟ್ಟೆ ಬಳಿ ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಮಾತನಾಡಿ, ವರ್ಷದ ಹಿಂದೆ ಹಾಕಲಾಗಿದ್ದ ಡಾಂಬರು ಒಂದೇ ಮಳೆಗೆ ಹಾಳಾಗಿದೆ. ಗುತ್ತಿಗೆದಾರರು ಭ್ರಷ್ಟಾಚಾರ ಮಾಡಿ ರಸ್ತೆಯ ಕೆಲಸವನ್ನು ಹಾಳು ಮಾಡಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವಾಗ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.ಈ ಹದಗೆಟ್ಟ ರಸ್ತೆಯನ್ನು ಶೀಘ್ರ ಸರಿಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸರಣಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೊಕೇಟ್ ನಿತಿನ್ ಕುತ್ತಾರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಕೋಶಾಧಿಕಾರಿ ಅಶ್ಫಾಕ್ ಅಳೇಕಲ, ಉಪಾಧ್ಯಕ್ಷ ಅಶ್ರಫ್ ಹರೇಕಳ ರಝಾಕ್ ಮುಡಿಪು, ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದ ಅಧ್ಯಕ್ಷ ಅಲ್ತಾಫ್ ಮುಡಿಪು, ಕಾರ್ಯದರ್ಶಿ ಜಗದೀಶ್, ಕಾರ್ಮಿಕ ಮುಖಂಡರಾದ ಜನಾರ್ಧನ ಕುತ್ತಾರ್, ರೋಹಿದಾಸ್ ಭಟ್ನಗರ, ಇಬ್ರಾಹಿಂ ಮದಕ, ಸುಂದರ ಕೆಂಪುಗುಡ್ಡೆ,ಚಂದ್ರಹಾಸ ಪಿಲಾರ್,ರಫೀಕ್ ಹರೇಕಳ,ಡಿವೈಎಫ್ಐ ಮುಖಂಡರಾದ ರಿಯಾಝ್ ಮಂಗಳೂರು, ಹಂಝ ಕಿನ್ಯಾ, ದಿವ್ಯರಾಜ್ ಕುತ್ತಾರ್, ಮಿಥುನ ಕುತ್ತಾರ್, ಹೈದರ್ ಹರೇಕಳ, ಶ್ರವಣ್ ತೇವುಲ, ವಿಕಾಸ್ ಕುತ್ತಾರ್, ಬಶೀರ್ ಲಚ್ಚಿಲ್, ರಿಜ್ವಾನ್ ಆಲಡ್ಕ ಮತ್ತಿತರರು ಉಪಸ್ಥಿತರಿದ್ದರು.
ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸುನೀಲ್ ತೇವುಲ ವಂದಿಸಿದರು.







