ಸರಕಾರದ ತಪ್ಪಾದ ನೀತಿಗಳಿಂದ ಯುವ ಜನತೆ ನಿರುದ್ಯೋಗಿಗಳಾಗುತ್ತಿದ್ದಾರೆ: ಸಂತೋಷ್ ಬಜಾಲ್

ಮುಡಿಪು: "ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲ ಪಾಲ್" ಎಂಬ ಘೋಷಣೆ ಅಡಿಯಲ್ಲಿ ಉದ್ಯೋಗದ ಹಕ್ಕಿಗಾಗಿ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಸಮಿಯಿಯ ನೇತೃತ್ವದಲ್ಲಿ ಸೆ.7 ರಿಂದ 9 ರ ತನಕ ನಡೆಯಲಿರುವ ಯುವಜನ ಜಾಥಾದ ಯಶಸ್ವಿಗಾಗಿ ಮುಡಿಪು ವಲಯ ಮಟ್ಟದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸ್ವಾಗತ ಸಮಿತಿ ರಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ "ಸರಕಾರದ ಹಲವು ತಪ್ಪಾದ ನೀತಿಗಳಿಂದ ಭಾರತದ ಯುವ ಜನತೆ ನಿರುದ್ಯೋಗಿಗಳಾಗಿ ಬದಲಾಗುತ್ತಿ ದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡುವ ಮೂಲಕ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕಡೆಗಣಿಸುತ್ತಿವೆ. ಯುವ ಜನರಿಗೆ ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿ ಆಡಳಿತಕ್ಕೆ ಬಂದಿರುವ ಕೇಂದ್ರ ಸರಕಾರ ಯುವ ಜನತೆಗೆ ಮೋಸ ಮಾಡಿದೆ. ಕನಿಷ್ಠ ಪಕ್ಷ ಖಾಲಿ ಬಿದ್ದಿರುವ ಸರಕಾರಿ ಹುದ್ದೆಗಳನ್ನು ಕೂಡಾ ಭರ್ತಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಗಳು ಸಿದ್ದವಾಗಿಲ್ಲ. ಖಾಲಿ ಬಿದ್ದಿರುವ ಹುದ್ದೆಗಳಿಗೆ ಸ್ಥಳೀಯರಿಗೆ ಆದ್ಯತೆಯ ಮೇರೆಗೆ ಉದ್ಯೋಗ ಕಲ್ಪಿಸಲು ಒತ್ತಾಯಿಸಿ ಡಿವೈಎಫ್‌ಐ ಜಿಲ್ಲೆಯಾದ್ಯಂತ ಯುವಜನರನ್ನು ಒಟ್ಟು ಸೇರಿಸಿ ಜಾಥಾ ನಡೆಸಿ ಆಳುವ ಸರಕಾರಕ್ಕೆ ಎಚ್ಚರಿಕೆಯನ್ನು ಮುಟ್ಟಿಸಲಿವೆ" ಎಂದು ಹೇಳಿದರು.
ಮುಡಿಪುವಿನಲ್ಲಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಪುಂಡರಿಕಾಕ್ಷ, ಗೌರವ ಸಲಹೆಗಾರರಾಗಿ ಅಬೂಬಕ್ಕರ್ ಜಲ್ಲಿ, ಅಬ್ದುಲ್ ಖಾದರ್ ಸಣ್ಣಬೈಲ್, ಹರೀಶ್ ಕುಮಾರ್ ಇರಾ, ಕರೀಂ ಗುದುರು, ಕಾರ್ಯಾಧ್ಯಕ್ಷರಾಗಿ ರಫೀಕ್ ಹರೇಕಳ, ಅಧ್ಯಕ್ಷರಾಗಿ ರಝಾಕ್ ಮುಡಿಪು, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಮೊಂಟೆಪದವು, ಕೋಶಾಧಿಕಾರಿಯಾಗಿ ಅಲ್ತಾಫ್ ಉಸ್ಮಾನ್, ಹಾಗೂ 63 ಸದಸ್ಯರ ಸಮಿತಿ ರಚಿಸಲಾಯಿತು.
ಡಿವೈಎಫ್‌ಐ ಮುಡಿಪು ಘಟಕ ಅಧ್ಯಕ್ಷ ಅಲ್ತಾಫ್ ಸಭೆಯ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಡಿವೈಎಫ್‌ಐ ಮುಖಂಡರಾದ ರಿಝ್ವಾನ್ ಹರೇಕಳ, ಹರೀಶ್ ಬೋಳಾರ್, ಬಶೀರ್, ಅಬ್ದುಲ್ ಖಾದರ್ ಇರಾ, ನಿಸಾರ್, ನವಾಝ್ ದೇರಳಕಟ್ಟೆ, ಉಮ್ಮರ್ ಫಾರೂಕ್, ಫಝಲ್ ಮುಡಿಪು, ಅಬ್ದುಲ್ ಖಾದರ್, ರಾಮಚಂದ್ರ ಫಜೀರ್, ಬಶೀರ್, ಎಂ.ಕೆ ಹನೀಫ್, ಇಮ್ರಾನ್ ಅಲಿ, ಎಂಡಿ ರಫೀಕ್, ನೌಶಾದ್, ಅಬ್ದುಲ್ ಶರೀಫ್, ಜಮಾಲುದ್ದೀನ್ ಸಖಾಫಿ, ಫಕ್ರುದ್ದೀನ್ ನಿಝಾರ್ ಅಕ್ಸ, ಮುನೀರ್, ಖಲೀಲ್, ಇರ್ಷಾದ್ ಎಂ.ಟಿ, ಜಲೀಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.







