ಎಸ್‌ಜೆಎಂ ಜಿಲ್ಲಾ ಮುಅಲ್ಲಿಂ ಸಮ್ಮೇಳನದ ಪೂರ್ವಭಾವಿ ಸಭೆ

ಮಂಗಳೂರು, ಆ.17: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ರಾಜ್ಯ ಕಾರ್ಯಕಾರಿಣಿ ಸಮಿತಿ ಮತ್ತು ದ.ಕ. ಜಿಲ್ಲಾ ವೆಸ್ಟ್, ಈಸ್ಟ್ ಹಾಗು ಸೌತ್ ಪದಾಧಿಕಾರಿಗಳ ಜಂಟಿ ಸಭೆಯು ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆ ಯಿತು. ಸಈದ್ ಉಸ್ತಾದ್ ದುಆಗೈದರು. ಎಸ್‌ಜೆಎಂ ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಮೂರುಗೋಳಿ ಸಭೆಯನ್ನು ಉದ್ಘಾಟಿಸಿದರು.
ಎಸ್‌ಜೆಎಂ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ ಜೆಪ್ಪುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾದ ನೂರನೇ ವಾರ್ಷಿಕದ ಪ್ರಯುಕ್ತ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಎಸ್‌ಜೆಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಡೆಯಲಿದೆ. ಕರ್ನಾಟಕ ರಾಜ್ಯಮಟ್ಟದ ಉದ್ಘಾಟನೆಯು ನಗರದ ಟೌನ್ ಹಾಲ್‌ನಲ್ಲಿ ಅ.14ರಂದು ನಡೆಯಲಿದೆ. ದ.ಕ ವೆಸ್ಟ್, ಈಸ್ಟ್ ಮತ್ತು ಸೌತ್ ಜಿಲ್ಲಾ ಅಧೀನದ ಎಲ್ಲಾ ರೇಂಜುಗಳ ಮುಅಲ್ಲಿಮರು ಭಾಗವಹಿಸಲಿದ್ದಾರೆ. ಮುಅಲ್ಲಿಂ ಸಮ್ಮೇಳನದಲ್ಲಿ ಮೂರು ಪ್ರಮುಖ ವಿಷಯಗಳಲ್ಲಿ ತರಗತಿ ನಡೆಯಲಿದೆ ಎಂದರು.
ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮತ್ತು ಸೌತ್ ಜಿಲ್ಲಾಧ್ಯಕ್ಷ ಯಾಕೂಬ್ ಲತೀಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಭೆಯಲ್ಲಿ ಎಸ್‌ಜೆಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನದ ನಿರ್ವಹಣಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಅದಿ ಮೂರುಗೋಳಿ, ಚೀಫ್ ಕನ್ವೀನರಾಗಿ ಯಾಕೂಬ್ ಲತೀಫಿ, ಕೋಶಾಧಿಕಾರಿ ಯಾಗಿ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಇಬ್ರಾಹಿಂ ಸಖಾಫಿ ಕಬಕ, ಸಿದ್ದೀಕ್ ಸಅದಿ, ಮುಹಮ್ಮದ್ ಸಖಾಫಿ, ಲತೀಫ್ ಸಖಾಫಿ, ಹಾಫಿಲ್ ಹನೀಫ್ ಮಿಸ್ಬಾಹಿ, ವೈಸ್ ಕನ್ವೀನರುಗಳಾಗಿ ಇಸ್ಮಾಯಿಲ್ ಮದನಿ, ಅಕ್ಬರ್ ಅಲಿ ಮದನಿ, ಚಿಪ್ಪಾರ್ ಅಬ್ದುಲ್ ರಹ್ಮಾನ್ ಸಖಾಫಿ, ಇಬ್ರಾಹಿಂ ಸಖಾಫಿ ಸೆರ್ಕಳ, ಇಸ್ಮಾಯಿಲ್ ಸಅದಿ ಉರುಮಣೆ, ಯೂನುಸ್ ಇಮ್ದಾದಿ ಅಲ್‌ಫುರ್ಖಾನಿ ಉಳ್ಳಾಲ, ಸದಸ್ಯರಾಗಿ ಅಬ್ದುರ‌್ರಹ್ಮಾನ್ ಮದನಿ ಜೆಪ್ಪು, ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲು, ಪುಂಡೂರು ಇಬ್ರಾಹಿಂ ಸಖಾಫಿ, ಪಿಎಂ ಮುಹಮ್ಮದ್ ಮದನಿ ಪೂಡಲ್, ಇಬ್ರಾಹಿಮ್ ನಈಮಿ, ಶರೀಫ್ ಸಖಾಫಿ ನೆಕ್ಕಿಲ್, ಅಬ್ದುಲ್ ಅಝೀಝ್ ನೂರಾನಿ, ಸಿರಾಜುದ್ದೀನ್ ಸಖಾಫಿ ಮುರ, ಅಬೂಬಕರ್ ಹಂದಾನಿ ಸುಳ್ಯ, ಅಶ್ರಫ್ ಇಮ್ದಾದಿ, ಸಿದ್ದೀಕ್ ಸಅದಿ, ಅಶ್ರಫ್ ಹಿಮಮಿ, ರಫೀಕ್ ಲತೀಫಿ ಸೌತ್, ರಫೀಕ್ ಝುಹ್ರಿ, ಹೈದರ್ ಅಶ್ರಫಿ, ಹೈದರ್ ಅಲಿ ಹಿಮಮಿ, ನವಾಝ್ ಸಖಾಫಿ ಉಳ್ಳಾಲ, ಶರೀಫ್ ಸಖಾಫಿ ದಿಡುಪೆ, ರಝಾಕ್ ಲತೀಫಿ ಕುಂತೂರು ಅವರನ್ನು ಆರಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ. ಕಾಮಿಲ್ ಸಖಾಫಿ ಸುರಿಬೈಲು ಸ್ವಾಗತಿಸಿದರು.







