ಆರ್‌ಜೆ ಕಮಲಾಕ್ಷ ಅಮೀನ್‌ಗೆ ಗೋಲ್ಡನ್ ಐಕಾನಿಕ್ ಅವಾರ್ಡ್

ಮಂಗಳೂರು: ಬಹರೈನ್‌ನ ಕಸ್ತೂರಿ ಕನ್ನಡ ಎಫ್‌ಎಂ ರೇಡಿಯೋದ ಆರ್‌ಜೆ ಕಮಲಾಕ್ಷ ಅಮೀನ್ ಅವರಿಗೆ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಶನಿವಾರ ಗೋಲ್ಡನ್ ಐಕಾನಿಕ್ ಅವಾರ್ಡ್ ನೀಡಿ ಪುರಸ್ಕರಿಸಲಾಯಿತು.
ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ ರಝಾಕ್ ಕೋಟೆ ಹೆಜಮಾಡಿ, ಬಹರೈನ್ ಕನ್ನಡ ಸಂಘದ ಪೂರ್ವಾಧ್ಯಕ್ಷ ಆಸ್ಟಿನ್ ಸಂತೋಷ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪೊಲೀಸ್ ವಿಶೇಷ ಘಟಕದ ಎಎಸ್‌ಐ ಗೋಪಾಲಕೃಷ್ಣ ಕುಂದರ್ ಮತ್ತು ಅಂತರ್‌ರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಉಪಸ್ಥಿತರಿದ್ದರು.
Next Story





