ಪಡುಬಿದ್ರೆ: ನಮ್ಮ ನಾಡು ಒಕ್ಕೂಟದ ಕಮ್ಯೂನಿಟಿ ಸೆಂಟರ್ ಉದ್ಘಾಟನೆ

ಪಡುಬಿದ್ರೆ: ನಮ್ಮ ನಾಡ ಒಕ್ಕೂಟದ ಕಮ್ಯೂನಿಟಿ ಸೆಂಟರ್ ಪಡುಬಿದ್ರೆಯ ಆದಿಧನ್ ಸಾಯಿ ಕೃಪ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಕಚೇರಿಯನ್ನು ಪಡುಬಿದ್ರೆಯ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ನಝೀರ್ ಹುಸೈನ್ ಉದ್ಘಾಟಿಸಿ, ವಿದ್ಯಾರ್ಥಿಗಳು ಈ ಕಮ್ಯೂನಿಟಿ ಸೆಂಟರ್ ಅನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ರಫೀಕ್ ಮಾಸ್ಟರ್ ಮಾತನಾಡಿ, ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ನಾಯಕರು ಮುಂದಾಗಬೆಕು. ಈ ಕೆಲಸವನ್ನು ನಮ್ಮ ನಾಡ ಒಕ್ಕೂಟ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಯಶಸ್ವಿಯಾಗಿ ಮಾಡುತ್ತಿದ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಮುಹಮ್ಮದ್ ಸಲೀಮ್ ಮೂಡುಬಿದಿರೆ ಮಾತನಾಡಿ, ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶಿಕ್ಷಣ ಮಾಹಿತಿ, ವಿವಿಧ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿಗಳನ್ನು ನೀಡಲಾಗುವುದು ಎಂದರು.
ಒಕ್ಕೂಟದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಝಮಿರ್ ಅಹ್ಮದ್ ರಶಾದಿ, ಕೋಶಾಧಿಕಾರಿ ಪೀರು ಸಾಹೇಬ್, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಕಾರ್ಕಳ ತಾಲೂಕು ಅಧ್ಯಕ್ಷ ಮೊಹ್ಸಿನ್ ಕಾರ್ಕಳ, ಅಡ್ವಕೇಟ್ ಇಮ್ತಿಯಾಝ್ ಬಿ., ನಿವೃತ್ತ ಯೋಧ ಮೊಹಿದ್ದಿನ್, ಪತ್ರಕರ್ತ ಆರಿಫ್ ಪಡುಬಿದ್ರೆ, ಪಡುಬಿದ್ರೆ ಗ್ರಾಪಂ ಸದಸ್ಯ ರಮೀಝ್ ಹುಸೇನ್, ಅಬ್ದುಲ್ ಅಝೀಝ್ ಕಂಚಿನಡ್ಕ, ಪಡುಬಿದ್ರೆ ಎಎಸ್ಸೆಸ್ಸೆಫ್ ಅಧ್ಯಕ್ಷ ಝಹೀರ್, ಒಕ್ಕೂಟದ ಕಾಪು ಘಟಕದ ಅಧ್ಯಕ್ಷ ಅಶ್ರಫ್ ಪಡುಬಿದ್ರೆ, ಪ್ರಧಾನ ಕಾರ್ಯದರ್ಶಿ ಆಸಿಫ್, ಉಸ್ತುವಾರಿ ನಿಸಾರ್ ಅಹ್ಮದ್, ಪದಾಧಿಕಾರಿಗಳಾದ ಇರ್ಷಾದ್ ಎರ್ಮಾಳ್, ಇರ್ಫಾನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ನಝೀರ್ ಹುಸೈನ್, ಕೇಂದ್ರ ಸಮಿತಿಯ ಅಧ್ಯಕ್ಷ ಮುಹಮ್ಮದ್ ಸಲೀಮ್ ಮೂಡುಬಿದಿರೆ, ನಿವೃತ್ತ ಬಿಎಸ್ಎಫ್ ಯೋಧ ಪಿ.ಎ.ಮೊಹಿದ್ದಿನ್ ಅವರನ್ನು ಗೌರವಿಸಲಾಯಿತು.
ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಆಶ್ರಫ್ ಪಡುಬಿದ್ರೆ ಸ್ವಾಗತಿಸಿದರು. ಅಬ್ದುಲ್ ಹಮೀದ್ ಯೂಸುಫ್ ಕಾರ್ಯಕ್ರಮ ನಿರೂಪಿಸಿದರು.







