ಅಬ್ದುಲ್ ರಹ್ಮಾನ್ ಕೊಳತ್ತಮಜಲು ಸ್ಮರಣಾರ್ಥ ರಕ್ತದಾನ ಶಿಬಿರ

ಕೊಣಾಜೆ,ಆ.21: ಎಸ್ಕೆಎಸೆಸ್ಸೆಫ್ ಮಂಜನಾಡಿ ಕ್ಲಸ್ಟರ್ ವತಿಯಿಂದ ಎಸ್ಕೆಎಸೆಸ್ಸೆಫ್ ನೆತ್ತಿಲಪದವು ಶಾಖೆಯ ಸಹಕಾರದೊಂದಿಗೆ ಎಸ್ಕೆಎಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ದ.ಕ.ಜಿಲ್ಲೆ ಹಾಗೂ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಸಮಸ್ತ 100ನೇ ವಾರ್ಷಿಕ ಪ್ರಚಾರ ಹಾಗೂ ಮರ್ಹೂಂ ಅಬ್ದುಲ್ ರಹ್ಮಾನ್ ಕೊಳತ್ತಮಜಲ್ ಸ್ಮರಣಾರ್ಥ ರಕ್ತದಾನ ಶಿಬಿರವು ನೆತ್ತಿಲಪದವು ಶಂಸುಲ್ ಉಲಮಾ ಮದ್ರಸದಲ್ಲಿ ನಡೆಯಿತು.
ಕ್ಲಸ್ಟರ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ದೊಡ್ಡಮನೆ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಹಾರಿಸ್ ಅಝ್ಹರಿ ದುಆಗೈದರು. ಕ್ಲಸ್ಟರ್ ಜೊತೆ ಕಾರ್ಯದರ್ಶಿ ಅಶ್ರಫ್ ಅರ್ಶದಿ ಸ್ವಾಗತಿಸಿದರು. ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾ ಉಪಾಧ್ಯಕ್ಷ ಫಾರೂಕ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೈಯದ್ ಇಬ್ರಾಹಿಂ ಬಾತಿಷ್ ತಂಳ್ ಅಲ್ ಬುಖಾರಿ, ನೆತ್ತಿಲಪದವು ಶಾಖಾಧ್ಯಕ್ಷ ಫಯಾಝ್, ವಲಯ ಬ್ಲಡ್ ಉಸ್ತುವಾರಿ ಇರ್ಫಾನ್ ಮಲಾರ್, ನರಿಂಗಾನ ಗ್ರಾಪಂ ಅಧ್ಯಕ್ಷ ನವಾಝ್, ಮುಹಮ್ಮದ್ ಹಾಜಿ, ಮಸೀದಿಯ ಅಧ್ಯಕ್ಷ ಅಬೂಬಕ್ಕರ್, ವಲಯ ವಿಖಾಯ ಕನ್ವೀನರ್ ಹನೀಫ್ ಮಲಾರ್, ವಲಯ ಸಮಿತಿ ಸದಸ್ಯ ಇಕ್ಬಾಲ್ ಇನೋಳಿ, ಹನೀಫ್ ನೆತ್ತಿಲಪದವು, ಮುನೀರ್ ನೆತ್ತಿಲಪದವು, ಶಾಖಾ ಕಾರ್ಯದರ್ಶಿ ಇಮ್ತಿಯಾಝ್, ಕೋಶಾಧಿಕಾರಿ ಸಫ್ವಾನ್, ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು. ಕ್ಲಸ್ಟರ್ ಜೊತೆ ಕಾರ್ಯದರ್ಶಿ ಸಮೀರ್ ಕಿನ್ಯ ವಂದಿಸಿದರು.





