ಎಸ್‌ವೈಎಸ್: ಇಸಾಬ-ಸಾಂತ್ವನ ತಂಡದಿಂದ ವೆನ್ಲಾಕ್ ಆಸ್ಪತ್ರೆ ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು, ಆ.23: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್)ದ ಸೇವಾ ತಂಡ ಸಾಂತ್ವನ -ಇಸಾಬ ದ.ಕ. ಜಿಲ್ಲಾ ವೆಸ್ಟ್ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ)ಅವರ 1500ನೇ ಜನ್ಮದಿನವನ್ನು ಸ್ವಾಗತಿಸುವ ಸಲುವಾಗಿ ಜಿಲ್ಲಾ ಮಟ್ಟದ ಸ್ವಚ್ಚತಾ ಶಿಬಿರವನ್ನು ವೆನ್ಲಾಕ್ ಆಸ್ಪತ್ರೆಯ ಪರಿಸರವನ್ನು ಸ್ವಚ್ಛ ಗೊಳಿಸುವ ಮೂಲಕ ಇತ್ತೀಚೆಗೆ ಉದ್ಘಾಟಿಸಲಾಯಿತು.
ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ. ಶಿವಪ್ರಕಾಶ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಎಸ್‌ವೈಎಸ್ ದ.ಕ. ಜಿಲ್ಲಾ ವೆಸ್ಟ್ ಅಧ್ಯಕ್ಷ ಮಹಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಇಸಾಬ ಸಾಂತ್ವನ ದ.ಕ. ಜಿಲ್ಲಾ ಮುಖ್ಯಸ್ಥ ಹಾಫಿಳ್ ಯಾಕೂಬ್ ಸಅದಿ ನಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ವೈಎಸ್ ರಾಜ್ಯ ಕೋಶಾಧಿಕಾರಿ ಮನ್ಸೂರ್ ಅಲಿ ಶಿವಮೊಗ್ಗ, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಇಬ್ರಾಹಿಂ ಖಲೀಲ್ ಮಾಲಿಕಿ ಬೋಳಂತೂರು, ವೆನ್ಲಾಕ್ ಆಸ್ಪತ್ರೆಯ ಆರ್‌ಎಂಒ ಡಾ. ಸುಧಾಕರ್, ಸಹಾಯಕ ಆಡಳಿತಾಧಿಕಾರಿ ಪುಟ್ಟರಾಜು ಮಾತನಾಡಿದರು.
ಈ ಸಂದರ್ಭ ಜಿಲ್ಲಾ ನಾಯಕರಾದ ಬದ್ರುದ್ದೀನ್ ಅಝ್ಹರಿ ಕೈಕಂಬ, ಸಯ್ಯಿದ್ ಇಸಾಕ್ ತಂಳ್ ಕಣ್ಣೂರು, ಹಸನ್ ಪಾಂಡೇಶ್ವರ, ಇಸ್ಹಾಕ್ ಉಳ್ಳಾಲ, ಅಬ್ದುಲ್ ಹಕೀಂ ಪೂಮಣ್ಣು, ನಝೀರ್ ಹಾಜಿ ಲುಲು, ಅಶ್ರಫ್ ಮಂಗಳೂರು, ಕೆ.ಸಿ. ಸುಲೈಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಇಸಾಬ ಸಾಂತ್ವನ ಜಿಲ್ಲಾ ಕಾರ್ಯದರ್ಶಿ ಉಮರುಲ್ ಫಾರೂಕ್ ಶೇಡಿಗುರಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ವಂದಿಸಿದರು.





