ಜಮೀಯತೆ ಅಹ್ಲೆ ಹದೀಸ್ ದಕ್ಷಿಣ ಕನ್ನಡ ಸಮಿತಿಯಿಂದ ಮಾರ್ಗದರ್ಶನ ಶಿಬಿರ; ದಾವಾ ವಿಂಗ್ ಉದ್ಘಾಟನೆ

ಮಂಗಳೂರು, ಆ.24: ಜಮೀಯತೆ ಅಹ್ಲೆ ಹದೀಸ್ ದ.ಕ. ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಸೀದಿ-ಮದ್ರಸಗಳ ನಿರ್ವಾಹಕರು , ಇಮಾಮರು , ಖತೀಬರು ಮತ್ತು ಅಧ್ಯಾಪಕರಿಗಾಗಿ ಮಾಹಿತಿ ಮತ್ತು ಮಾರ್ಗದರ್ಶನ ಶಿಬಿರ’ ಜಮೀಯತೆ ಅಹ್ಲೆ ಹದೀಸ್ ದಾವಾ ವಿಂಗ್‌ನ ಅಧಿಕೃತ ಉದ್ಘಾಟನೆ ನಗರದ ಮಸ್ಜಿದುಲ್ ಇಹ್ಸಾನ್ ಎಚ್‌ಐಎಫ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಜೆಎಎಚ್ ಮಂಗಳೂರು ಅಧ್ಯಕ್ಷ ನಜುಮುದ್ದೀನ್ ಅಸ್ಸಾದಿ ಅಧ್ಯಕ್ಷತೆ ವಹಿಸಿದ್ದರು.
ಮುಸ್ಲಿಮ್ ಸಮುದಾಯವನ್ನು ಅಜ್ಞಾನ, ಮೌಢ್ಯ ಮತ್ತು ಕೆಡುಕುಗಳಿಂದ ಮುಕ್ತಗೊಳಿಸುವ ಶಿಕ್ಷಣ ಮತ್ತು ಪ್ರಗತಿಯ ಮಾರ್ಗದಲ್ಲಿ ಮುನ್ನಡೆಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಶೇಖ್ ತ್ವಾರಿಕ್ ಸಫೀಉರ‌್ರಹ್ಮಾನ್ ಮದನಿ, ಮೊಯ್ದೀನ್ ಕುಂಞ್ಞೆ ,ಉಸ್ತಾದ್ ಝಿಯಾಉರ‌್ರಹ್ಮಾನ್, ಉಸ್ತಾದ್ ಮುರ್ತದಾ ಅನ್ಸಾರಿ, ಉಸ್ತಾದ್ ಫೈಝೂನ್ ನಝೀರಿ, ಶೇಖ್ ಮುದಸ್ಸರ್ ಉಮ್ರಿ, ಶೇಖ್ ಮಕ್ಸೂದ್ ಉಮ್ರಿ ಮಾರ್ಗದರ್ಶನ ನೀಡಿದರು.
ಕಾರ್ಯದರ್ಶಿ ಅಬ್ದುಸ್ಸಲಾಮ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ಧಾರ್ಮಿಕ ಮತ್ತು ನೈತಿಕ ಪುನರುತ್ಥಾನದ ಉದ್ದೇಶಕ್ಕಾಗಿ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಸಂಪನ್ನೂಲ ವ್ಯಕ್ತಿಗಳ ಕ್ರಿಯಾ ಸಮಿತಿ(ದಾವಾ ವಿಂಗ್) ಯನ್ನು ರಚಿಸಲಾಯಿತು. ಪದಾಧಿಕಾರಿಗಳ ವಿವರ ಇಂತಿವೆ.
ಉಸ್ತಾದ್ ಅಫ್ತಾಬ್ ಬಿನ್ ಅಹ್ಮದ್ (ಅಧ್ಯಕ್ಷ), ಉಸ್ತಾದ್ ಫೈಝೂನ್ ನಝೀರಿ ಮತ್ತು ಉಸ್ತಾದ್ ಮುರ್ತದ ಅನ್ಸಾರಿ (ಉಪಾಧ್ಯಕ್ಷರು), ಉಸ್ತಾದ್ ಝಿಯಾಉರ‌್ರಹ್ಮಾನ್ (ಖಜಾಂಚಿ), ಅಬ್ದುಸ್ಸಮದ್ ಬಜಾಲ್ (ಕಾರ್ಯದರ್ಶಿ), ಉಸ್ತಾದ್ ಶಿಹಾಬ್ ಕಣ್ಣೂರು, ಉಸ್ತಾದ್ ನಮ್‌ಶೀರ್ ಸ್ವಲಾಹಿ ಬಿ.ಸಿ.ರೋಡ್, ಉಸ್ತಾದ್ ಜದೀರ್ ನಝೀರಿ ವಿಟ್ಲ, ಮಕ್ಸೂದ್ ಉಮ್ರಿ ಕಸಬಾ ಬೆಂಗ್ರೆ, ಹಾಫೀಝ್ ಯಾಸೀನ್ ಮತ್ತು ಶೌಕತ್ ಅಲಿ ಜಾಮಯಿ ಕಾಟಿಪಳ್ಳ, ಸಮೀರ್ ಮುಹಮದಿ ಕೃಷ್ಣಾಪುರ, ಮುದಸ್ಸಿರ್ ಉಮ್ರಿ ಕೋಟೆಬಾಗಿಲು, ಉಸ್ತಾದ್ ಶಾಕೀರ್ ಉಳ್ಳಾಲ, ಹಾಫಿಝ್ ಶಾವೇಝ್ ನಝೀರಿ , ಸಲೀಲ್ ನಝೀರಿ, ಅಯಾಝ್ ನಝೀರಿ (ಸದಸ್ಯರು)







