ಕೆಲೋ ಇಂಡಿಯಾ ಅಶ್ಮಿತಾ ಬ್ಯಾಡ್ಮಿಂಟನ್ ಲೀಗ್ ಕ್ರೀಡಾಕೂಟ

ಮಂಗಳೂರು: ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ನೇತೃತ್ವದಲ್ಲಿ ಕೇಲೋ ಇಂಡಿಯಾ ಸಂಸ್ಥೆಯ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವ ಕೆಲೋ ಇಂಡಿಯಾ ಅಶ್ಮಿತಾ ಬ್ಯಾಡ್ಮಿಂಟನ್ ಲೀಗ್ 25-26 ಎರಡು ದಿನಗಳ ಕ್ರೀಡಾಕೂಟವು ಆಗಸ್ಟ್ 23ರಂದು ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು.
ಈ ಕ್ರೀಡಾಕೂಟಕ್ಕೆ ಶ್ರೀಮತಿ ಅಕ್ಷತಾ ಕುಪ್ಪಗಲ್ ಉಪ ಆಯುಕ್ತರು ಕಂದಾಯ ಮಂಗಳೂರು ಮಹಾನಗರ ಪಾಲಿಕೆ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಬಾಲಕಿಯರ 15,17,19, ವಯೋಮಿತಿಯ ಸಿಂಗಲ್ಸ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಪ್ರದೀಪ್ ಡಿಸೋಜ ಉಪ ನಿರ್ದೇಶಕರು ಯುವ ಸಬಲೀಕರಣ ಕ್ರೀಡಾ ಇಲಾಖೆ ದಕ್ಷಿಣ ಕನ್ನಡ. ಹಾಗೂ ಶ್ರೀ ಸಂಜಯ್ ಬಲಿಪ ಉಪ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಮಂಗಳೂರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು ಹಾಗೂ ಕಾರ್ಯದರ್ಶಿಯಾದ ಶ್ರೀ ಸುಪ್ರೀತ ಆಳ್ವ ಇವರು ಧನ್ಯವಾದ ಸಮರ್ಪಿಸಿದರು ಶ್ರೀಮತಿ ರೇಖಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





