ಗ್ಲೋಬಲ್ ಇನ್ ಸೂಟ್ ನಲ್ಲಿ ವಸತಿ ಸೌಲಭ್ಯ: ಡಾ. ರಾಜೇಂದ್ರ ಕುಮಾರ್

ಮಂಗಳೂರು: ನಗರದ ಅತ್ತಾವರದಲ್ಲಿ ಗ್ಲೋಬಲ್ ಇನ್ ಸೂಟ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದಲ್ಲಿ ವಸತಿ ಸೌಲಭ್ಯ ಗ್ರಾಹಕರಿಗೆ ಆರಂಭಿಸಲಾಗಿದೆ. ಶೀಘ್ರದಲ್ಲಿ ರೆಸ್ಟೋರೆಂಟ್ ಸೌಲಭ್ಯವನ್ನು ಆರಂಭಿಸ ಲಾಗುವುದು ಎಂದು ಸಂಸ್ಥೆಯ ಪ್ರವರ್ತಕರಾದ ಡಾ.ಎಂ. ಎನ್.ರಾಜೇಂದ್ರ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ವಸತಿ ಸಮುಚ್ಚಯದಲ್ಲಿ 29 ರೂಂ ಗಳು ಮತ್ತು ಸೂಟ್ಗಳು ಗ್ರಾಹಕರಿಗೆ ತಂಗಲು ಆಧುನಿಕ ಸೌಲಭ್ಯ ಗಳೊಂದಿಗೆ ಮಂಗಳೂರು ನಗರದ ಪ್ರಮುಖ ಕೇಂದ್ರವಾದ ಅತ್ತಾವರದಲ್ಲಿ ಲಭ್ಯವಿರುತ್ತದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಹ ಪ್ರವರ್ತ ಕರಾದ ಮೇಘರಾಜ್ ಉಪಸ್ಥಿತರಿದ್ದರು.
*ಎಚ್ ಡಿಎಫ್ ಸಿ ಬ್ಯಾಂಕ್ ಶಾಖೆ ಉದ್ಘಾಟನೆ:- ಅತ್ತಾವರದ ಗ್ಲೋಬಲ್ ಇನ್ ಸೂಟ್ ನಲ್ಲಿ ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸೋಮವಾರ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಚ್ ಡಿಎಫ್ ಸಿ ಅತ್ತಾವರ ಬ್ರಾಂಚ್ ಮ್ಯಾನೇಜರ್ ಧೀರಜ್ ಕಟ್ಟೆ ಮನೆ,ಕ್ಲಸ್ಟರ್ ಹೆಡ್ ವಾಸುದೇವನ್, ಪಿಲಿಫ್ ಕ್ವಾಡ್ರಸ್, ಸರ್ಕಲ್ ಹೆಡ್ (ನಿರ್ವಹಣೆ) ಮೋಹನ್ ಮೊದಲಾದ ವರು ಉಪಸ್ಥಿತರಿದ್ದರು.







