ಶಿರಸಿಯಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

ಶಿರಸಿ: ಹಲವಾರು ಭಾಷೆಗಳ ನಡುವೆ ಕೊಂಕಣಿ ಭಾಷೆಯು ಬಾಂಧವ್ಯದ ಭಾಷೆಯಾಗಿ ಮೆರೆಯುತ್ತಿದೆ ಎಂದು ಶಾಸಕ ಭೀಮಣ್ಣ ನಾಯಕ್ ಹೇಳಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣ ಕಲಾ ಮಂಡಳ (ರಿ.) ಶಿರಸಿ ಇವರ ಸಹಯೋಗದಲ್ಲಿ ಶಿರಸಿಯ ರಂಗಧಾಮದ ನೆಮ್ಮದಿ ಆವರಣ ಸಭಾಂಗಣದಲ್ಲಿ ರವಿವಾರ ನಡೆದ ಕೊಂಕಣಿ ಮಾನ್ಯತಾ ದಿನಾಚರಣೆ- 2025 ಕಾರ್ಯಕ್ರಮದಲ್ಲಿ ಮಾತನಾಡಿದರು. ವಂ. ಸ್ವಾಮಿ ಪೀಟರ್ ಪಿಂಟೊರವರು ಕೊಂಕಣಿ ಧ್ವಜಾರೋಹಣ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊಂಕಣಿ ಭಾಷೆಗೆ ಮಾನ್ಯತೆ ದೊರೆತ ಬಗ್ಗೆ ಹಾಗೂ ಇದರ ಮಹತ್ವವನ್ನು ವಿವರಿಸಿದರು.
ರವಿ ಹೆಗಡೆ ಗಡಿಹಳ್ಳಿ ಶಿರಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವ ಅತಿಥಿಗಳಾಗಿದ್ದ ನಗರ ಸಭೆ ಶಿರಸಿಯ ಉಪಾಧ್ಯಕ್ಷ ರಮಾಕಾಂತ ಎಂ. ಭಟ್ಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯರಾದ ನವೀನ್ ಲೋಬೊ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಡೆದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಕೊಂಕಣಿ ಭಾಷಣ ಹಾಗೂ ಕೊಂಕಣಿ ಗೀತಗಾಯನ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.
*ಕವಿಗೋಷ್ಠಿ: ವಾಸುದೇವ ಶಾನಭಾಗ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕೊಂಕಣಿ ಕವಿಗಳಾದ ದಿಪಾಲಿ ಸಾಮಂತ, ನಾಗೇಶ ಅಣ್ವೇಕರ, ಶ್ರೀನಿವಾಸ ಶಾನಭಾಗ, ಕೃಷ್ಣ ಪದಕಿ, ರಾಜೇಂದ್ರ ಕುಮಾರ ಎಸ್. ಮಿರಾಂದಾ, ಅಜಿತ ಬಿಳಗಿ, ಉಮೇಶ ದೈವಜ ತಮ್ಮ ಕವಿತೆಗಳನ್ನು ವಾಚಿಸಿದರು.
*ಭಾಷಣ ಸ್ಪರ್ಧೆ: ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ಪ್ರಣಮ್ಯ ಹರೀಶ ಭಟ್ಟ- ಪ್ರಥಮ ಸ್ಥಾನ, ರೀತು ಕಿರಣ್ ಶೇಟ್ ದ್ವಿತೀಯ ಸ್ಥಾನ, ರಿತು ವಿ. ಕರ್ಕಿ - ತೃತೀಯ ಸ್ಥಾನವನ್ನು ಪಡೆದರು.
*ಗೀತಗಾಯನ ಸ್ಪರ್ಧೆ: ಕೊಂಕಣಿ ಗೀತಗಾಯನ ಸ್ಪರ್ಧೆಯಲ್ಲಿ ಪ್ರಿಸ್ಟನ್ ಡಾಯಸ್ ಹಾಗೂ ಮೆಲ್ವಿತಾ- ಪ್ರಥಮ ಸ್ಥಾನ, ಸೌಜನ್ಯ ಅನುತಿ ಸಿದ್ದಿ- ದ್ವಿತೀಯ ಸ್ಥಾನ, ಹಾಗೂ ಗಿರಿಧರ ಗೋಕುಲದಾಸ - ತೃತೀಯ ಸ್ಥಾನವನ್ನು ಪಡೆದರು.
ಸ್ಥಳೀಯ ಸಂಚಾಲಕ ಶ್ರೀ ರಾಮ ಕಿಣಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ಯಕ್ಷಗಾನ ತಾಳಮದ್ದಲೆ, ಲೋಕವೇದ ವೈಭವ, ಕಲಾ ವೈವಿಧ್ಯ, ವಿನೋದಾವಳಿ ನಡೆಯಿತು.







