ಸಮಸ್ತ ಸಂಘಟನೆಯಿಂದ ಇಷ್ಕೇ ರಸೂಲ್ ಕಾರ್ಯಕ್ರಮ: ಪೂರ್ವಭಾವಿ ಸಭೆ

ಮಂಗಳೂರು: ಪ್ರವಾದಿ ಮುಹಮ್ಮದ್ (ಸ)ಅವರ ಜನ್ಮ ದಿನವನ್ನು ಆಚರಿಸುವ ಸಲುವಾಗಿ ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಮತ್ತು ಸಮಸ್ತದ ಎಲ್ಲಾ ಪೋಷಕ ಸಂಘಟನೆಗಳು ಇತ್ತೀಚೆಗೆ ಬಿ.ಸಿ.ರೋಡ್ ಸಮೀಪದ ತಲಪಾಡಿಯಲ್ಲಿರುವ ಸಮಸ್ತ ಕೇಂದ್ರ ಕಚೇರಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿತು.
ಉಸ್ಮಾನುಲ್ ಫೈಝಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಹುಸೈನ್ ಬಾಅಲವಿ ಕುಕ್ಕಾಜೆ ತಂಙಳ್ ಸಭೆ ಉದ್ಘಾಟಿಸಿದರು. ಸಮಸ್ತ ಕರ್ನಾಟಕ ಮಶಾವರ, ಎಸ್‌ವೈಎಸ್, ಎಸ್ಕೆಎಸೆಸ್ಸೆಫ್, ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್, ಮದ್ರಸ ಮ್ಯಾನೇಜ್ಮೆಂಟ್, ಜಂಇಯ್ಯತುಲ್ ಮುದರ್ರಿಸೀನ್, ಜಂಇಯ್ಯತುಲ್ ಖುತಬಾ, ಸಮಸ್ತ ಬಾಲ ವೇದಿ ಸಂಯುಕ್ತವಾಗಿ ಇಷ್ಕೇ ರಸೂಲ್ ಕಾರ್ಯಕ್ರಮ ಹಾಗೂ ಗ್ರ್ಯಾಂಡ್ ಮೀಲಾದ್ ಜಾಥಾ ನಡೆಸಲು ತೀರ್ಮಾನಿಸಿದೆ.
ಸೆ.9ರಂದು ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.ಬೆಳಗ್ಗೆ 9ಕ್ಕೆ ಬಾವುಟಗುಡ್ಡೆಯಿಂದ ಆರಂಭ ಗೊಳ್ಳುವ ಜಾಥಾ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಮೂಲಕ ಹಂಪನಕಟ್ಟೆ ಮಾರ್ಗವಾಗಿ ಪುರಭವನ ತಲುಪ ಲಿದೆ. ಬಳಿಕ ಸಮಸ್ತ ಅಧ್ಯಕ್ಷ ಸಯ್ಯಿದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಝೈನುಲ್ ಆಬಿದೀನ್ ತಂಙಳ್, ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್ ಹಾಗೂ ಉಸ್ಮಾನುಲ್ ಫೈಝಿ, ಸ್ಪೀಕರ್ ಯು.ಟಿ. ಖಾದರ್, ಬಿ.ಎಂ. ಫಾರೂಕ್ ಬೆಂಗಳೂರು, ಇನಾಯತ್ ಅಲಿ ಮುಲ್ಕಿ, ಇಫ್ತಿಕಾರ್ ಅಲಿ ಮತ್ತಿತರರು ಭಾಗವಹಿಸಲಿದ್ದಾರೆ.
*ಕಾರ್ಯಕ್ರಮದ ಯಶಸ್ವಿಗಾಗಿ ರಚಿಸಲಾದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಉಸ್ಮಾನುಲ್ ಫೈಝಿ, ಜನರಲ್ ಕನ್ವೀನರ್ ಆಗಿ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ, ಖಜಾಂಚಿಯಾಗಿ ರಫೀಕ್ ಹಾಜಿ ಕೊಡಾಜೆ, ಕೋ ಆರ್ಡಿನೇಟರ್ ಅಗಿ ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಯಮಾನಿ ಆಯ್ಕೆಯಾಗಿದ್ದಾರೆ. ಸಮಸ್ತದ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.







