ದೇರಳಕಟ್ಟೆ: ರ‍್ಯಾಗಿಂಗ್ ವಿರುದ್ಧ ಅರಿವು ಕಾರ್ಯಕ್ರಮ

ಕೊಣಾಜೆ: ಯೆನೆಪೋಯ ದಂತ ವೈದ್ಯಕೀಯ ಕಾಲೇಜು ಆಸ್ಪತ್ರೆ ಇದರ ವತಿಯಿಂದ 'ರ‍್ಯಾಗಿಂಗ್ ತಡೆ ಅರಿವು' ಕಾರ್ಯಕ್ರಮವನ್ನು ಇತ್ತೀಚೆಗೆ ಆಚರಿಸಲಾಯಿತು.
ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಸುರಕ್ಷತೆ ಗೌರವಪೂರ್ಣ ಶೈಕ್ಷಣಿಕ ಪರಿಸರವನ್ನು ಒದಗಿಸುವ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಕಾಂತ ಚಾತ್ರ, ಉಪ ಪ್ರಾಂಶುಪಾಲರಾದ ಡಾ. ಹಸನ್ ಸರ್ಫಾರಾಜ್, ಡೀನ್ ಡಾ. ಶಾಮ್ ಎಸ್ ಭಟ್, ನೋಡಲ್ ಅಧಿಕಾರಿಯಾದ ಡಾ. ಸನತ್ ಶೆಟ್ಟಿ, ಸಮಿತಿ ಸಂಚಾಲಕರಾದ ಡಾ. ಫಹದ್ ಮೊಹಮದ್, ಸಿಬಂದಿ ಸಲಹೆಗಾರರಾದ ಡಾ. ವರ್ಷ ಮತ್ತು ಡಾ. ರಶ್ಮಿ, ವಿದ್ಯಾರ್ಥಿ ಮಂಡಲದ ಸದಸ್ಯರು ಭಾಗವಹಿಸಿದ್ದರು.
ಒಂದು ವಾರ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಜಾಗೃತಿ ಭಾಷಣ, ಪೋಸ್ಟರ್ ಮೇಕಿಂಗ್ ಮತ್ತು ರೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಡಾ. ಫಹದ್ ಮೊಹಮ್ಮದ್ ರವರು ಭಾಗವಹಿಸಿದ ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಸಿಬ್ಬಂದಿ ವರ್ಗಕ್ಕೆ ಮತ್ತು ವಿದ್ಯಾರ್ಥಿ ವೃಂದಕ್ಕೆ ಅಭಿನಂದಿಸಿದರು.





