ಭಾಗ್ಯಲಕ್ಷ್ಮಿ ಪರಿಪಕ್ವ ಮೊತ್ತ ಪಾವತಿ: ಅರ್ಜಿ ಆಹ್ವಾನ

ಮಂಗಳೂರು, ಆ.29 ಭಾಗ್ಯಲಕ್ಷ್ಮಿ ಯೋಜನೆಯಡಿ ನೊಂದಾಯಿಸಿರುವ 18 ವರ್ಷ ತುಂಬಿದ ಅರ್ಹ ಫಲಾನುಭಗಳ ಪರಿಪಕ್ವ ಮೊತ್ತ ಪಾವತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ನೊಂದಾಯಿಸಲ್ಪಟ್ಟ 2006-07ನೇ ಸಾಲಿನ 701 ಫಲಾನುಭವಿಗಳಲ್ಲಿ ಅರ್ಹರಾದವರಿಗೆ (ಮರಣ ಹೊಂದಿದ ಫಲಾನುಭವಿಗಳನ್ನು ಹೊರತುಪಡಿಸಿ) ಪರಿಪಕ್ವ ಮೊತ್ತ 32,351 ರೂ.ವನ್ನು ಎಲ್‌ಐಸಿ ಸಂಸ್ಥೆಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಅದರಲ್ಲಿ ಕೆಲವು ಫಲಾನುಭವಿಗಳು ವಲಸೆ ಹೋಗಿರುವುದು ಮತ್ತು ದಾಖಲಾತಿಗಳನ್ನು ತಡವಾಗಿ ಸಲ್ಲಿಸುತ್ತಿರುವುದಾಗಿ ತಿಳಿದು ಬಂದಿದೆ. ಅರ್ಹ ಫಲಾನುಭಇಗಳ ಮಾಹಿತಿಯನ್ನು ಪೋಷಕರಿಂದ ಪಡೆದು ಅಕ್ಟೋಬರ್ 31ರೊಳಗೆ ಕಡ್ಡಾಯವಾಗಿ ಮೆಚ್ಯೂರಿಟಿ ಕ್ಲೈಮ್ ಲಾಗಿನ್‌ನಲ್ಲಿ ಅಳವಡಿಸುವ ಪ್ರಕ್ರಿಯೆಯಾಗಿದೆ. ಈ ಯೋಜನೆಯಡಿ ಹೆಸರು ನೋಂದಾಯಿಸಿ ರುವ 18 ವರ್ಷ ತುಂಬಿದ ಅರ್ಹ ಫಲಾನುಭವಿಗಳು ಪರಿಪಕ್ವ ಮೊತ್ತಕ್ಕೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ಸಲ್ಲಿಸಲು ನಗರದ ಉರ್ವ ಮಾರ್ಕೆಟ್ ಕಟ್ಟಡದ 3ನೇ ಮಹಡಿಯಲ್ಲಿರುವ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಕಚೇರಿಯನ್ನು (ದೂ.ಸಂ: 0824-2263199) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.





