ಕುದ್ರೋಳಿ -ಕಂಡತ್‌ಪಳ್ಳಿ: ರಸ್ತೆ ದುರಸ್ತಿಗೆ ಎಸ್‌ಡಿಪಿಐ ಮನವಿ

ಮಂಗಳೂರು, ಆ.29: ನಗರದ ಕುದ್ರೋಳಿಯ ಕಂಡತ್‌ಪಳ್ಳಿಯಿಂದ ಕುದ್ರೋಳಿವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದನ್ನು ದುರಸ್ತಿ ಪಡಿಸುವಂತೆ ಎಸ್‌ಡಿಪಿಐ ಕುದ್ರೋಳಿ 43ನೇ ವಾರ್ಡ್ ಸಮಿತಿಯ ವತಿಯಿಂದ ಮುಝೈರ್ ಕುದ್ರೋಳಿ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕಂಡತ್‌ಪಳ್ಳಿಯಿಂದ ಕುದ್ರೋಳಿವರೆಗಿನ ರಸ್ತೆಯು ಗಂಭೀರವಾಗಿ ಹದಗೆಟ್ಟಿದೆ. ಇದರಿಂದ ಸ್ಥಳೀಯ ನಿವಾಸಿಗಳ ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ದೈನಂದಿನ ಸಂಚಾರದಲ್ಲಿ ಗಣನೀಯ ತೊಂದರೆಯಾಗುತ್ತಿದೆ. ಈ ರಸ್ತೆಯ ಕಳಪೆ ಸ್ಥಿತಿಯಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭ ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ರಾಝಾ, ಅನ್ಸಾರ್ ಕುದ್ರೋಳಿ ಉಪಸ್ಥಿತರಿದ್ದರು.
Next Story





