ಎಸ್ಯುಸಿಸಿ ಕರ್ನಾಟಕದ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

ಬಾವ ಮದನಿ ಬಾಂಬಿಲ
ಬಂಟ್ವಾಳ, ಆ.30: ಕರ್ನಾಟಕ ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ನ ಮಹಾಸಭೆಯು ತೋಡಾರು ಉಸ್ಮಾನ್ ಫೈಝಿಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಉಪಾಧ್ಯಕ್ಷ ಹಾಜಿ ಮಾಹಿನ್ ದಾರಿಮಿ ಪಾತೂರು ಸಭೆಯನ್ನು ಉದ್ಘಾಟಿಸಿದರು. ಅಧ್ಯಕ್ಷ ಹಾಜಿ ಬಿ.ಎಂ.ಬಾವ ಮದನಿ ಬಾಂಬಿಲ, ಉಪಾಧ್ಯಕ್ಷ ಹಾಜಿ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ ಮಾತನಾಡಿದರು. ಕೋಶಾಧಿಕಾರಿ ಅಬೂ ಸಿರಾಜ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ 2024-25ನೇ ಸಾಲಿನ ಲೆಕ್ಕಪತ್ರ ಹಾಗೂ ಪ್ರಧಾನ ಕಾರ್ಯದರ್ಶಿ ಹಾಜಿ ಟಿ.ಎಂ.ಹನೀಫ್ ನಿಝಾಮಿ ಅಲ್ ಫಾರೂಖಿ ನಂದರಬೆಟ್ಟು ವರದಿ ವಾಚಿಸಿದರು.
2025-26ನೆ ಸಾಲಿನ ಗೌರವಾಧ್ಯಕ್ಷರಾಗಿ ಸಮಸ್ತ ಕೇರಳ ಜಂಯಿಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಹಾಜಿ ಕೆ. ಎಂ.ಉಸ್ಮಾನುಲ್ ಫೈಝಿ, ಅಧ್ಯಕ್ಷರಾಗಿ ಹಾಜಿ ಬಿ.ಎಂ.ಬಾವ ಮದನಿ ಬಾಂಬಿಲ, ಉಪಾಧ್ಯಕ್ಷ ರಾಗಿ ಹಾಜಿ ಮಾಹಿನ್ ದಾರಿಮಿ ಪಾತೂರು, ಹಾಜಿ ಕೆ.ಬಿ. ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ, ಕೋಶಾಧಿಕಾರಿಯಾಗಿ ಅಬೂಸಿರಾಜ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಟಿ.ಎಂ.ಹನೀಫ್ ನಿಝಾಮಿ ಅಲ್ ಫಾರೂಖಿ ನಂದರಬೆಟ್ಟು, ಕಾರ್ಯದರ್ಶಿಯಾಗಿ ಮಜೀದ್ ಫೈಝಿ ನಂದಾವರ, ಅಬ್ದುಲ್ ಹಮೀದ್ ಮುಸ್ಲಿಯಾರ್ ಪರ್ಲಿಯ, ವರ್ಕಿಂಗ್ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ಇಕ್ಬಾಲ್ ಹನೀಫಿ ನಂದರಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಫಳುಲುರ್ರಹ್ಮಾನ್ ಮುಸ್ಲಿಯಾರ್ ಬೆಳ್ಳಾರೆ, ಹಾಜಿ ಅಬ್ದುಲ್ ಮಜೀದ್ ಮದನಿ ಕಲ್ಲಡ್ಕ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕರ್ ಮುಸ್ಲಿಯಾರ್ ಬೋಳಂತೂರು, ಮುಹಮ್ಮದ್ ಮುಸ್ಲಿಯಾರ್ ಕುಕ್ಕಾಜೆ, ಹನೀಫ್ ದಾರಿಮಿ ಸವಣೂರು, ಬಶೀರ್ ವಗ್ಗ, ಇಬ್ರಾಹೀಂ ದಾರಿಮಿ ನಂದರಬೆಟ್ಟು, ಅಬ್ದುಲ್ಲ ರಹ್ಮಾನಿ ಬಾಂಬಿಲ ಅವರನ್ನು ಆಯ್ಕೆ ಮಾಡಲಾಯಿತು.







