ಸುರತ್ಕಲ್: ಅಸ್ವಿರಾತುಲ್ ಮುಸ್ತಕೀಮ್ ಆದರ್ಶ ಸಮ್ಮೇಳನ

ಸುರತ್ಕಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಮತ್ತು ಮದರಸ ಮ್ಯಾನೇಜ್ ಮೆಂಟ್ ವತಿಯಿಂದ ಅಸ್ವಿರಾತುಲ್ ಮುಸ್ತಕೀಮ್ ಆದರ್ಶ ಸಮ್ಮೇಳನ ಚೊಕ್ಕಬೆಟ್ಟು ಎಂಜೆಎಂ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ತೋಡಾರು ಉಸ್ಮಾನ್ ಫೈಝಿ ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ಮುಹಮ್ಮದ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್ ಅವರು ದುವಾ ಆಶೀರ್ವಚನ ಗೈದರು.
ಸುರತ್ಕಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಅಧ್ಯಕ್ಷತೆ ವಹಿಸಿದ್ದರು.
ಚೊಕ್ಕಬೆಟ್ಟು ಎಂಜೆಎಂ ಖತೀಬ್ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ, ಅಬ್ದುಲ್ ಸಲಾಂ ಬಾಖವಿ ಅವರು ಮುಖ್ಯಭಾಷಣಗೈದರು.
ಸಮಾರಂಭದಲ್ಲಿ ಇಸ್ಮಾಯೀಲ್ ಫೈಝಿ ಸೂರಿಂಜೆ, ಮುಸಾಬಕ 2ಕೆ25ರ ಅಧ್ಯಕ್ಷ ನಿಸಾರ್ ಅಂಗರಗುಂಡಿ, ಎಂಜೆಎಂ ಅಧ್ಯಕ್ಷ ಅಬ್ದುಲ್ ಅಝೀಝ್, ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಎ.ಕೆ. ಅಬ್ದುಲ್ ಖಾದರ್ ಜೀಲಾನಿ, ಶಿಹಾಬುದ್ದೀನ್ ಚೊಕ್ಕಬೆಟ್ಟು, ಎಸ್ಕೆ ಎಸ್ಸೆಸ್ಸೆಫ್ ವಲಯಾಧ್ಯಕ್ಷ ಇಲ್ಯಾಸ್ ಸೂರಿಂಜೆ, ಇಸ್ಮಾಯಿಲ್ ದಾರಿಮಿ ಕಿರಾಅತ್ ಪಠಿಸಿದರು. ಸುರತ್ಕಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ನ ಪ್ರಧಾನ ಕಾರ್ಯದರ್ಶಿ ತ್ವಯ್ಯಿಬ್ ಫೈಝಿ ಬೊಳ್ಳೂರು ಸ್ವಾಗತಿಸಿದರು. ಇಮ್ರಾನ್ ಮಖ್ದೂಮಿ ಧನ್ಯವಾದ ಸಮರ್ಪಿಸಿದರು.







