ಮೂಡುಶೆಡ್ಡೆ: ವ್ಯಕ್ತಿ ನಾಪತ್ತೆ

ಮಂಗಳೂರು, ಸೆ.6: ಮೂಡುಶೆಡ್ಡೆಯ ಶಿವನಗರ ನಿವಾಸಿ ಜೆ.ನವೀನ್ ಕುಮಾರ್ (37) ಎಂಬವರು ಸೆ.4ರಿಂದ ನಾಪತ್ತೆಯಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದ ನವೀನ್ ಕುಮಾರ್ ಸೆ.4ರಂದು ಸಂಜೆ 5ಕ್ಕೆ ಸ್ನೇಹಿತ ಬಿಷ್ಣು ಎಂಬವರ ಬೈಕ್ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನವೀನ್ ಕುಮಾರ್ 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ಮನೆಯಿಂದ ತೆರಳುವಾಗಿ ಬಿಳಿ ಅಡ್ಡ ಗೆರೆಗಳಿರುವ ಕೆಂಪು ಬಣ್ಣದ ಟಿ-ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ತಮಿಳು, ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





