ಹಿದಾಯ ಫೌಂಡೇಶನ್ ನಿಯೋಗದಿಂದ ವೀರೇಂದ್ರ ಹೆಗಡೆಯವರನ್ನು ಭೇಟಿ

ಬಂಟ್ವಾಳ: ಹಿದಾಯ ಫೌಂಡೇಶನ್, ಮಂಗಳೂರು ಇದರ ನಿಯೋಗವು ರಾಜ್ಯಸಭಾ ಸದಸ್ಯ, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆಯವರನ್ನು ಧರ್ಮಸ್ಥಳದ ಕಚೇರಿಯಲ್ಲಿ ಬೇಟಿ ಮಾಡಿ ಫೌಂಡೇಶನ್ ವತಿಯಿಂದ ಶಾಲು, ಫಲ ಪುಷ್ಪಗಳೊಂದಿಗೆ ಗೌರವ ಸಲ್ಲಿಸಿತು.
ಕಾವಳಕಟ್ಟೆಯ ಹಿದಾಯ ಶೇರ್ ಮತ್ತು ಕೇರ್ ಕಾಲನಿಯ ವಿಶೇಷ ಮಕ್ಕಳ ವಸತಿಯುತ ಶಾಲೆಯ ಭಾಗಶಃ ತಡೆಗೋಡೆ ನಿರ್ಮಾಣಕ್ಕೆ ತಮ್ಮ ರಾಜ್ಯಸಭಾ ನಿಧಿಯಿಂದ ಅನುದಾನ ಮಂಜೂರಾತಿ ನೀಡಿದ್ದಾನ್ನು ಸ್ಮರಿಸಲಾಯಿತು.
ಹಿದಾಯ ಫೌಂಡೇಶನ್ ನ ಬಹುಮುಖಿ ಸೇವಾ ಕಾರ್ಯಗಳ ಬಗ್ಗೆ ಡಾ.ಹೆಗಡೆಯವರಿಗೆ ಪರಿಚಯ ಮಾಡಿಕೊಡಲಾಯಿತು. ಸಂಸ್ಥೆಯ ವಿಶಿಷ್ಟ ಸಾಮಾಜಿಕ, ಶೈಕ್ಷಣಿಕ ಸೇವೆಗಳನ್ನು ರಾಜ್ಯಸಭಾ ಸದಸ್ಯರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು,
ಟ್ರಸ್ಟಿ ಎಫ್.ಎಂ. ಬಶೀರ್, ಸದಸ್ಯರಾದ ಹಕೀಂ ಕಲಾಯಿ, ಇಲ್ಯಾಸ್ ಕಕ್ಕಿಂಜೆ ಉಪಸ್ಥಿತರಿದ್ದರು.
Next Story





