ಬ್ಯಾರಿ ಆಶು ಕವನ ಬರೆಯುವ ಮತ್ತು ಮೆಹಂದಿ ಹಚ್ಚುವ ಸ್ಪರ್ಧೆಗಳಿಗೆ ಆಹ್ವಾನ

ದೇರಳಕಟ್ಟೆ, ಸೆ.14: ಮೇಲ್ತೆನೆಯ ದಶಮಾನೋತ್ಸವ ಕಾರ್ಯಕ್ರಮವು ಸೆಪ್ಟಂಬರ್ 30ರಂದು ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬ್ಯಾರಿ ಆಶು ಕವನ ಬರೆಯುವ ಮತ್ತು ಮೆಹಂದಿ ಹಚ್ಚುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಎರಡೂ ಸ್ಪರ್ಧೆಗಳನ್ನು ಸೆ.30ರಂದು ಕಾರ್ಯಕ್ರಮದ ಸಭಾಂಗಣದಲ್ಲೇ ನಡೆಸಲಾಗುವುದು.
*ಆಶು ಕವನ ಬರೆಯುವ ಸ್ಪರ್ಧೆೆ : ಕವನದ ಶೀರ್ಷಿಕೆಯನ್ನು ಸ್ಪರ್ಧೆೆಗೆ ಅರ್ಧ ಗಂಟೆ ಮುಂಚಿತವಾಗಿ ಸ್ಪರ್ಧಾಳು ಗಳಿಗೆ ಸ್ಥಳದಲ್ಲೇ ನೀಡಲಾಗುವುದು. ಬಳಿಕ ಬ್ಯಾರಿ ಭಾಷೆಯಲ್ಲಿ ಕವನ ಬರೆಯಲು 1 ಗಂಟೆಯ ಕಾಲಾವಕಾಶ ನೀಡಲಾಗುವುದು. ಈ ಸ್ಪರ್ಧೆಯು (ಗಂಡು ಮತ್ತು ಹೆಣ್ಣು) ಮುಕ್ತವಾಗಿರುತ್ತದೆ. ವಯಸ್ಸಿನ ಪರಿಮಿತಿ ಇಲ್ಲ. ಆದರೆ ಬ್ಯಾರಿ ಭಾಷಿಗರಾಗಿರಬೇಕು.
*ಮೆಹಂದಿ ಹಚ್ಚುವ ಸ್ಪರ್ಧೆ: 13 ವರ್ಷ ಪ್ರಾಯ ಮೇಲ್ಪಟ್ಟ ಬ್ಯಾರಿ ಮುಸ್ಲಿಂ ಸ್ತ್ರೀಯರು ಮಾತ್ರ ಭಾಗವಹಿಸಬಹುದು. ಭಾರತೀಯ ಶೈಲಿಯ ಮೆಹಂದಿಯನ್ನು ಸ್ಪರ್ಧಿಯು ಇನ್ನೊಬ್ಬರ ಒಂದು ಕೈಗೆ ಮಾತ್ರ ಹಚ್ಚಬೇಕು. ಮೆಹಂದಿ ಹಚ್ಚಲು 1 ಗಂಟೆಯ ಕಾಲಾವಕಾಶ ನೀಡಲಾಗುವುದು. ಮೆಹಂದಿ ಹಚ್ಚಲು ಬೇಕಾದ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು.
ಈ ಎರಡೂ ಸ್ಪರ್ಧೆಯಲ್ಲಿ ಭಾಗವಹಿಸಲು ಅಸಕ್ತಿಯುಳ್ಳವರು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಸೆ.25ರೊಳಗೆ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ (ಮೊ.ಸಂ.9481017495) ಅವರನ್ನು ಸಂಪರ್ಕಿಸಬಹುದು ಹಾಗೂ ಹೆಸರು ನೋಂದಾಯಿಸಬಹುದು ಎಂದು ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







