ಕದ್ರಿಯಲ್ಲಿ ರಾಷ್ಟ್ರೀಯ ಮಕ್ಕಳ ಉತ್ಸವ, ಮುದ್ದು ಕೃಷ್ಣ ಸ್ಪರ್ಧೆ: ರಿತನ್ಯಾ ಕೊಟ್ಟಾರಿ ದ್ವಿತೀಯ

ಮಂಗಳೂರು: ಕದ್ರಿ ಮಂಜುನಾಥ ಕ್ಷೇತ್ರದ ಅವರಣದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಅಯೋಜಿಸಿದ್ದ 43ನೇ ರಾಷ್ಟ್ರೀಯ ಮಕ್ಕಳ ಉತ್ಸವ (ಶ್ರೀ ಕೃಷ್ಣ ವೇಷ ಸ್ಪರ್ಧೆ) ಎರಡು ವರ್ಷದೊಳಗಿನ ಮುದ್ದು ಕೃಷ್ಣ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನುಶ್ ಮತ್ತು ನಯನಾ ಕೊಟ್ಟಾರಿ ದಂಪತಿಯ ಪುತ್ರಿ ರಿತನ್ಯಾ ಕೊಟ್ಟಾರಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಶಾಹಿಸ್ ಎಸ್. ಶೆಟ್ಟಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಒಟ್ಟು 12 ವೇದಿಕೆಗಳಲ್ಲಿ ಏಕಕಾಲದಲ್ಲಿ ನಾನಾ ವಿಭಾಗಗಳಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಗಳು ಜರುಗಿದವು.
Next Story





