ಎಸ್.ಜೆ.ಎಂ. ಉಳ್ಳಾಲ ರೇಂಜ್ ನಿಂದ ಮೌಲಿದ್ ಮಜ್ಲಿಸ್

ಉಳ್ಳಾಲ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್.ಜೆ.ಎಂ. ಉಳ್ಳಾಲ ರೇಂಜ್ ವತಿಯಿಂದ ಮೌಲಿದ್ ಮಜ್ಲಿಸ್ ಉಳ್ಳಾಲದ ಕಲ್ಲಾಪು ಜುಮಾ ಮಸೀದಿಯಲ್ಲಿ ನಡೆಯಿತು.
ಅಳೇಕಲ ಜಾಮಿಉಲ್ ಅಮೀನ್ ಮಸ್ಜಿದ್ ಖತೀಬ್ ಅಬೂ ಝಿಯಾದ್ ಮದನಿ ಪಟ್ಟಾಂಬಿ ದುಆ ನೆರವೇರಿಸಿದರು. ಕಲ್ಲಾಪು ಜುಮಾ ಮಸ್ಜಿದ್ ಖತೀಬ್ ಶರೀಫ್ ಸಅದಿ ಉದ್ಘಾಟಿಸಿದರು.
ಎಸ್.ಜೆ.ಎಂ. ಕರ್ನಾಟಕ ರಾಜ್ಯ ತರಬೇತುದಾರ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಮಾತನಾಡಿ ಪ್ರವಾದಿಯವರು ತೋರಿಸಿದ ಸತ್ಯ, ನ್ಯಾಯ, ಶಾಂತಿ ಸಹಬಾಳ್ವೆ ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಪಟ್ಲ ತಖ್ವಾ ಜುಮಾ ಮಸ್ಜಿದ್ ಖತೀಬ್ ಎಂ.ಸಿ.ಮುಹಮ್ಮದ್ ಫೈಝಿ ಮೋಙಂ, ಕೋಡಿ ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಆದಂ ಫೈಝಿ, ಮುಕ್ಕಚ್ಚೇರಿ ಅಬೂಬಕರ್ ಸಿದ್ದೀಕ್ ಜುಮಾ ಮಸ್ಜಿದ್ ಖತೀಬ್ ಶರೀಫ್ ಬಾಖವಿ ಮಾತನಾಡಿ ಶುಭ ಹಾರೈಸಿದರು.
ಮುಹಮ್ಮದ್ ಇರ್ಫಾನ್ ಸಅದಿ ಅಳೇಕಲ, ಅರ್ಫಾಝ್ ಮದನಿ ಮಿಲ್ಲತ್ ನಗರ, ಹುಸೈನ್ ಮದನಿ ಅನ್ನೂರಿ ಅಳೇಕಲ ಪ್ರವಾದಿ ಕೀರ್ತನಾ ಮದ್ಹ್ ಆಲಾಪಿಸಿದರು. ಎಸ್.ಎಂ.ಎ.ಇ.ಟಿ. ಮುಫತ್ತಿಶ್ ಹುಸೈನ್ ಸಅದಿ ಹೊಸ್ಮಾರ್, ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ, ಮುಕ್ಕಚ್ಚೇರಿ ಮುದರ್ರಿಸ್ ಅಬ್ಬಾಸ್ ಮದನಿ, ರೇಂಜ್ ಕೋಶಾಧಿಕಾರಿ ವಿ.ಎ.ಮುಹಮ್ಮದ್ ಸಖಾಫಿ ಉಳ್ಳಾಲ, ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಮೌಲಿದ್ ನಿರ್ವಹಣಾ ಸಮಿತಿಯ ಕನ್ವೀನರ್ ಅಬ್ದುಲ್ ಖಾದರ್ ಸಅದಿ ಪಾಂಡೇಲ್ ಪಕ್ಕಾ, ಇರ್ಫಾನ್ ಫಾಳಿಲಿ, ಅಬ್ಬಾಸ್ ಮದನಿ ಬಂಡಾಡಿ, ಸೆರ್ಕಳ ಇಬ್ರಾಹೀಂ ಸಖಾಫಿ, ಮುನೀರ್ ಲತೀಫಿ, ಮುಹಿಯುದ್ದೀನ್ ಮದನಿ ಸುಂದರಭಾಗ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ ರೇಂಜ್ ಅಧ್ಯಕ್ಷ ಜಲಾಲುದ್ದೀನ್ ಮದನಿ ಕಾರ್ಯಕ್ರಮ ನಿರೂಪಿಸಿದರು. ಮೌಲಿದ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವಿ.ಕೆ.ಅಬ್ದುರ್ರಹ್ಮಾನ್ ಸಖಾಫಿ ಮುಕ್ಕಚ್ಚೇರಿ ಸ್ವಾಗತಿಸಿದರು.







