ದೇರಳಕಟ್ಟೆ: ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ನೂತನ ಪಿಜಿ ಬ್ಲಾಕ್, ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

ಕೊಣಾಜೆ: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ (FMHMC) ಹೊಸ ಸ್ನಾತಕೋತ್ತರ ಬ್ಲಾಕ್ ಹಾಗೂ ಎಫ್ಎಂಸಿಐ ಬ್ಯಾಡ್ಮಿಂಟನ್ ಇಂಡೋರ್ ಸ್ಟೇಡಿಯಂನ್ನು ಫಾದರ್ ಮುಲ್ಲರ್ ಚಾರಿಟಬಲ್ ಇನ್ ಸ್ಟಿಟ್ಯೂಷನ್ಸ್ ನ ನಿರ್ದೇಶಕ ರೆ.ಫಾ. ಫಾಸ್ಟಿನ್ ಲೂಕಸ್ ಲೋಬೋ ಉದ್ಘಾಟಿಸಿದರು.
ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಮ್ಯಾಕ್ಸಿಂ ಕೊರಿಯಾ, ಸುನೀಲ್, ಮ್ಯಾಕ್ಸಿಂ ಕ್ರಾಸ್ಟಾ, ವಿನ್ಸೆಂಟ್ ಪಿಂಟೋರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಇ.ಎಸ್. ಜೇ. ಪ್ರಭು ಕಿರಣ, ಜೀವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಜೋಲಿ ಡಿಮೆಲ್ಲೋ, ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಜ್ಯೋಶ್ನಾ ಎಸ್. ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಎಸ್. ಸ್ವಾಗತಿಸಿದರು.
ಎಫ್ಎಂಎಚ್ಎಂಸಿ ಕ್ರೀಡಾ ಕಾರ್ಯದರ್ಶಿ ಮಿಸ್ಟರ್ ನಿಖಿಲ್ ಸ್ಯಾಮುಯೆಲ್ ವಂದಿಸಿದರು.
Next Story





