ಕಮಿಷನ್ ನೀಡುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು

ಮಂಗಳೂರು, ಸೆ.15: ಪಾರ್ಟ್ ಟೈಮ್ ಜಾಬ್‌ನಲ್ಲಿ ಕಮಿಷನ್ ನೀಡುವುದಾಗಿ ನಂಬಿಸಿ 6.40ಲಕ್ಷ ರೂ. ವಂಚಿಸಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಟೆಲಿಗ್ರಾಮ್ ಪೇಜ್ ನೋಡುತ್ತಿದ್ದಾಗ ಪಾರ್ಟ್ ಟೈಮ್ ಜಾಬ್ ಮಾಡಿದರೆ ಕಮಿಷನರ್ ನೀಡುವುದಾಗಿ ಅಪರಿಚಿತರು ಬರೆದಿರುವುದನ್ನು ನಂಬಿ ಲಿಂಕ್ ಒತ್ತಿ ಗ್ರೂಪ್‌ಗೆ ಜಾಯಿನ್ ಆಗಿದ್ದೆ. ಬಳಿಕ ಆ ಗ್ರೂಪ್‌ನಲ್ಲಿ ಪ್ರತಿಮಾ ಆನ್‌ಕಲ್ ಎಂಬಾಕೆ ವಿಷಯವನ್ನು ವಿವರಿಸುತ್ತಿದ್ದರು. ಆಕೆ ಆರ್‌ಟಿಜಿಎಸ್ ಮೂಲಕ ಹಣವನ್ನು ವರ್ಗಾವಣೆ ಮಾಡು ವಂತೆ ಸೂಚಿಸಿದ್ದರು. ಅದನ್ನು ನಂಬಿದ ತಾನು ಹಂತ ಹಂತವಾಗಿ 6.40 ಲಕ್ಷ ರೂ. ವರ್ಗಾವಣೆ ಮಾಡಿದ್ದೆ. ಬಳಿಕ ತಾನು ಹಣವನ್ನು ವಾಪಸ್ ಕೇಳಿದಾಗ ಹಣ ಕೊಡದೆ ಮೋಸ ಮಾಡಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Next Story





