ಸುಳ್ಯ: ವಿದ್ಯುತ್ ಶಾಕ್‍ಗೆ ವ್ಯಕ್ತಿ ಬಲಿ

ಸುಳ್ಯ: ತೆಂಗಿನ ಕಾಯಿ ತೆಗೆಯುತ್ತಿದ್ದ ವೇಳೆ ಅಲ್ಯೂಮಿನಿಯಂ ದೋಟಿ ವಿದ್ಯುತ್ ಲೈನ್‍ಗೆ ತಾಗಿ ಶಾಕ್ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಯ್ಯನಕಟ್ಟೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ರಾಮ ತಂಬಿನಮಕ್ಕಿ (47) ಮೃತರು ಎಂದು ಗುರುತಿಸಲಾಗಿದೆ. ಅಯ್ಯನಕಟ್ಟೆ ಸಮೀಪ ಅಲ್ಯೂಮಿನಿಯಂ ದೋಟಿ ಸಹಾಯದಿಂದ ತೆಂಗಿನಕಾಯಿ ಕೀಳುವ ವೇಳೆ ರಾಮ ಅವರ ಕೈಯಿಂದ ನಿಯಂತ್ರಣ ಕಳೆದುಕೊಂಡು ತೋಟದ ಬದಿಯಲ್ಲಿ ಹಾದು ಹೋಗಿರುವ ಎಚ್.ಟಿ. ಲೈನ್‍ಗೆ ತಾಗಿದೆ. ದೋಟಿಯ ಮೂಲಕ ವಿದ್ಯುತ್ ಹರಿದು ರಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೆಸ್ಕಾಂನ ಅಧಿಕಾರಿಗಳು ಹಾಗೂ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





