ʼಅರಿಯಿರಿ ಮನುಕುಲದ ಪ್ರವಾದಿಯನ್ನುʼ ಲಾಂಛನ, ಭಿತ್ತಿ ಪತ್ರ ಅನಾವರಣ

ಮಂಗಳೂರು, ಸೆ.15: ಯುನಿವೆಫ್ ಕರ್ನಾಟಕದ ವತಿಯಿಂದ ಸೆ.19ರಿಂದ 2026ರ ಜನವರಿ 2ರ ತನಕ ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಆಯೋಜಿಸಿ ರುವ 20ನೇ ವರ್ಷದ ಱಅರಿಯಿರಿ ಮನುಕುಲದ ಪ್ರವಾದಿಯನ್ನುೞ ಎಂಬ ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಲಾಂಛನ ಮತ್ತು ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮವು ನಗರದ ಫಳ್ನೀರ್ ಲುಲು ಸೆಂಟರ್‌ನಲ್ಲಿರುವ ದಾರುಲ್ ಇಲ್ಮ್ ಸಭಾಂಗಣದಲ್ಲಿ ಜರುಗಿತು.
ಲಾಂಛನವನ್ನು ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್ ಹಾಗೂ ಇಂಟೀರಿಯರ್ ಡೆಕೊರೇಟರ್ ಶಾನವಾಝ್ ಎಚ್.ಎಚ್. ಅನಾವರಣ ಮಾಡಿದರು. ಅಭಿಯಾನದ ಭಿತ್ತಿ ಪತ್ರವನ್ನು ಹಿದಾಯ ಫೌಂಡೇಶನ್‌ನ ಝಿಯಾವುದ್ದೀನ್ ಅಹ್ಮದ್ ಅನಾವರಣಗೊಳಿಸಿದರು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಕು ರ‌್ರಹ್ಮಾನ್ ಕಿರಾಅತ್ ಪಠಿಸಿದರು. ಅಭಿಯಾನದ ಸಂಚಾಲಕ ಯು.ಕೆ. ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.
Next Story





