ಉದ್ಯಮಿ ಪ್ರಭಾಕರ ಪೂಂಜ ನಿಧನ

ಮಂಗಳೂರು, ಸೆ.18: ನಗರದ ಖ್ಯಾತ ಹೋಟೆಲ್ ಉದ್ಯಮಿ, ಹಂಪನಕಟ್ಟೆಯ ಪೂಂಜಾ ಇಂಟರ್‌ನ್ಯಾಶನಲ್‌ನ ಮಾಲಕ ಪ್ರಭಾಕರ ಪೂಂಜಾ (72) ಹೃದಯಾಘಾತದಿಂದ ಬುಧವಾರ ನಿಧನರಾದರು.
ಪತ್ನಿ, ಪುತ್ರ ಹಾಗೂ ನಾಲ್ಕು ಮಂದಿ ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಫಳ್ನೀರ್‌ನ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಅವರನ್ನು ಅಸೌಖ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೂಲತಃ ಬಂಟ್ವಾಳದ ಅವರು, ಸಣ್ಣ ಪ್ರಾಯದಲ್ಲಿ ಮುಂಬೈಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಬಂದು ಪೂಂಜಾ ಇಂಟರ್ ನ್ಯಾಶನಲ್ ಹೊಟೇಲ್ ನಿರ್ಮಾಣ ಮಾಡಿದ್ದರು. ಇದು ಆ ಕಾಲದ ಅದ್ದೂರಿ ಹೊಟೇಲ್ ಎಂಬ ಖ್ಯಾತಿಗೊಳಗಾಗಿತ್ತು.
Next Story





