ಮುಡಿಪುವಿನಲ್ಲಿ 'ಫರ್ಹೇ ಮೀಲಾದ್’ ಸಂಭ್ರಮ ಸಮಾವೇಶ

ಕೊಣಾಜೆ: ಪ್ರವಾದಿ ಪೈಗಂಬರರ 1500ನೇ ಜನ್ಮ ಮಾಸಾಚರಣೆ ಪ್ರಯುಕ್ತ ಮುಡಿಪು ಮಜ್ಲಿಸ್ ಎಜುಕೇಶನ್
ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಫರ್ಹೇ ಮೀಲಾದ್’ ಸಂಭ್ರಮ ಸಮಾವೇಶ ಮಜ್ಲಿಸ್ ಎಜು ಪಾರ್ಕ್‌ನಲ್ಲಿ ಶುಕ್ರವಾರ ನಡೆಯಿತು.
ಇದೇ ಸಂದರ್ಭದಲ್ಲಿ ನಡೆದ ಬೃಹತ್ ಹುಬ್ಬುನ್ನಬೀ ಸಮ್ಮೇಳನದಲ್ಲಿ ನಾಗೂರು ದರ್ಗಾ ಶರೀಫ್ ಖಲೀಫಾ ಹಝ್ರತ್ ಸಯ್ಯಿದ್ ಮುಹಮ್ಮದ್ ಆಶೀರ್ವಚನ ನೀಡಿದರು.
ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ವಿಶ್ವ ಪ್ರವಾದಿಯವರ ಸಂದೇಶ, ತತ್ವವನ್ನು ಪಾಲಿಸಿಕೊಂಡು ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ದೇವರು ನಮ್ಮನ್ನು ಪ್ರೀತಿಸಿಸಲು ಆರಂಭಿಸಿದರೆ ಅದನ್ನು ತಡೆಯಲು ಯಾರಿದಂಲೂ ಸಾಧ್ಯವಿಲ್ಲ. ಯಾರಾದರೂ ಕಷ್ಟದಲ್ಲಿದ್ದಾಗ ಜಾತಿಬೇಧ ಮರೆತು ಸಹಾಯ ಮಾಡುವ ಮನೋಭಾವ ನಮ್ಮದಾಗಬೇಕು. ಆದೂರು ತಂಙಳ್ ಅವರ ಮೂಲಕ ಮುಡಿಪುವಿನ ಎಜ್ಯುಪಾರ್ಕ್ ನಲ್ಲಿ ಧಾರ್ಮಿಕ ಶಿಕ್ಷಣ, ಲೌಕಿಕ ಶಿಕ್ಷಣ ನೀಡುತ್ತಾ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇಂದು ವಿಕಲಚೇತನರಿಗೆ ಕೃತಕ ಕೈಕಾಲು ಉಚಿತವಾಗಿ ನೀಡುವ ಮೂಲಕ ಈ ಕಾರ್ಯ ಕ್ರಮವು ಮಾನವೀಯತೆಯ, ಸಮಾನತೆಯ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಮಜ್ಲಿಸ್ ಎಜು ಪಾರ್ಕ್ ಅಧ್ಯಕ್ಷರಾದ ಶರಫುಸ್ಸಾದಾತ್ ಸಯ್ಯಿದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕ ಡಾ ಎಮ್ಮೆಸ್ಸಂ ಝೈನಿ ಕಾಮಿಲ್, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ, ಸುನ್ನೀ ಯುವಜನ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಮಜ್ಲಿಸ್ ಅಕಾಡೆಮಿ ಉಪಾಧ್ಯಕ್ಷರಾದ ಸಯ್ಯಿದ್ ಮುಸ್ತಫಾ ತಂಙಳ್, ಸಯ್ಯಿದ್ ಹಸನ್ ತಂಙಳ್ ಆದೂರು, ಸಮಸ್ತ ಕೇರಳ ಜಂಇಯತುಲ್ ಉಲಮಾ ಸದಸ್ಯರಾದ ಮುಹಮ್ಮದ್ ಅಲೀ ಸಖಾಫಿ, ಯಾಸಿರ್ ಸಖಾಫಿ ಮಲಪ್ಪುರಂ, ಉಮರ್ ಸಖಾಫಿ ತಲಕ್ಕಿ ಮಾತನಾಡಿದರು.
ವಿದ್ವಾಂಸರಾದ ಅಬೂಬಕರ್ ಮುಸ್ಲಿಯಾರ್ ಬೊಳ್ಮಾರ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ, ಮಾಜಿ ಮೇಯರ್ ಅಶ್ರಫ್ ಉಪಸ್ಥಿತರಿದ್ದರು.
ಸನ್ಮಾನ: ಕರ್ನಾಟಕ ಉಲಮಾ ಒಕ್ಕೂಟದ ನಾಯಕರಾದ ಅಬ್ದುಲ್ ರಝಾಕ್ ಮದನಿ, ಖಾಸಿಂ ಮದನಿ ಕರಾಯ, ಅಬ್ದುಲ್ ರಹ್ಮಾನ್ ಮದನಿ ಮೂಳೂರು ಸೇರಿದಂತೆ ಅಧ್ಯಾಪನ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಎಂಟು ಧರ್ಮ ವಿದ್ವಾಂಸರನ್ನು ಸನ್ಮಾನಿಸಲಾಯಿತು.
ವಾಗ್ಮಿಗಳಾದ ಬಾದುಶಾ ಸಖಾಫಿ ಆಲಪ್ಪುಝ, ಕೇರಳ ರಾಜ್ಯ ಹಜ್ ಕಮಿಟಿ ಅಧ್ಯಕ್ಷ ಡಾ ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಹುಬ್ಬುರ್ರಸೂಲ್ ಪ್ರಭಾಷಣ ಮಾಡಿದರು. ಮಜ್ಲಿಸ್ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಅದಿ ಸ್ವಾಗತಿಸಿದರು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಪಾತೂರು ಧನ್ಯವಾದ ಸಲ್ಲಿಸಿದರು. ಸಲಾಂ ಸಅದಿ ಅಳಕೆ ನಿರೂಪಿಸಿದರು.
ವಿಕಲಚೇತನರಿಗೆ ಕೃತಕ ಕೈ, ಕಾಲುಗಳ ಉಚಿತ ಕೊಡುಗೆ:
ಕಾರ್ಯಕ್ರಮದ ಪ್ರಯುಕ್ತ ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿರುವ ವಿಕಲಚೇತನರ ಜೀವನದಲ್ಲಿ ಹೊಸ ಭರವಸೆ ಮೂಡಿಸುವ ಉದ್ದೇಶದಿಂದ ೧೫೦ಕ್ಕೂ ಅಧಿಕ ಮಂದಿಗೆ ಕೃತಕ ಕೈ ಮತ್ತು ಕಾಲುಗಳನ್ನು ಉಚಿತವಾಗಿ ಅಳವಡಿಸಲಾಯಿತು.
ರಕ್ತದಾನ, ವೈದ್ಯಕೀಯ ಶಿಬಿರ
ರಕ್ತದಾನ ಹಾಗೂ ವೈದ್ಯಕೀಯ ಶಿಬಿರ ಕಾರ್ಯಕ್ರಮದ ಅಂಗವಾಗಿ ನಡೆದ ರಕ್ತದಾನ ಶಿಬಿರ ಮತ್ತು ಬೃಹತ್ ವೈದ್ಯಕೀಯ ಶಿಬಿರದಲ್ಲಿ ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದಿಕ್ ಚಿಕಿತ್ಸೆಯನ್ನು ನೀಡಲಾಯಿತು. ಯು.ಟಿ.ಫರೀದ್ ಸ್ಮರಣಾರ್ಥ ಸಂಗಮ, ವಯಸ್ಕರ ಮದ್ರಸಾಕ್ಕೆ ಶಿಲಾನ್ಯಾಸ ನಡೆಯಿತು.







